ಜೂಜಾಡುತ್ತಿದ್ದ 8 ಮಂದಿ ಬಂಧನ

Published on

ಪಾವಗಡ: ಜೂಜು ಅಡ್ಡೆ ಮೇಲೆ ಅರಸೀಕೆರೆ ಪೊಲೀಸರು ದಾಳಿ ನಡೆಸಿ ಎಂಟು ಜನರನ್ನು ಬಂಧಿಸಿ, ನಗದನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಅರಸೀಕೆರೆ ಪೊಲೀಸ್​ ಠಾಣೆ ವ್ಯಾಪ್ತಿಯ ಸಾಸಲುಕುಂಟೆ ಗ್ರಾಮದ ಕರ್ನಾಟಕ- ಆಂದ್ರ ಗಡಿ ಭಾಗದಲ್ಲಿ ಕುಂದುರ್ಪಿ ಇಸ್ಮಾಯಿಲ್​, ವೆಂಕಟಮ್ಮನಹಳ್ಳಿ ರಾಮಲಿಂಗಪ್ಪ, ಲಿಮಗದಹಳ್ಳಿ ಈರಲಿಂಗ ರೆಡ್ಡಿ ಸೇರಿ ಎಂಟು ಜನರನ್ನು ಬಂಧಿಸಿ ಇವರಿಂದ 17.500 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಸಾಸಲುಕುಂಟೆ ಗ್ರಾಮದ ಆಸುಪಾಸಿನಲ್ಲಿ 8-&10 ಮಂದಿ ಜೂಜು ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಧುಗಿರಿ ಡಿವೈಎಸ್​ಪಿ ರಾಮಕೃಷ್ಣಪ್ಪ, ಪಾವಗಡ ಗ್ರಾಮಾಂತರ ಸಿಪಿಐ ಗಿರೀಶ್​ ಮಾರ್ಗದರ್ಶನದಂತೆ ಅರಸೀಕೆರೆ ಪೊಲೀಸರು ಠಾಣೆಯ ಸಬ್​ ಇನ್​ಸ್ಪೆಕ್ಟರ್​ ತಾರಾಸಿಂಗ್​, ರಾಜೇಂದ್ರ ಮತ್ತು ಸಿಬ್ಬಂದಿ ಶೌಕತ್​, ಜಗನಾಥ್​, ದಾವೆಲ್​, ಸಂದೇಶ್​ ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net