ಪಾವಗಡ:- ತಾಲೂಕಿನ ಶೈಲಾಪುರ ಹಾಗೂ ಆಂದ್ರ- ಕರ್ನಾಟಕ ಗಡಿ ಪ್ರದೇಶ ಸಾಸಲಕುಂಟೆ ಗ್ರಾಮದ ಹೊರವಲದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 7 ಜನ ಜೂಜು ಕೋರರನ್ನು ಬಂಧಿಸಿದ್ದಾರೆ. ಶುಕ್ರವಾರ ವೈ.ಎನ್.ಹೊಸಕೋಟೆ ಹೋಬಳಿಯ ಸಾಸಲಕುಂಟೆ ಬಳಿಯ ಜೂಜು ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ 11 ಬೈಕ್ ಹಾಗೂ 6,500 ರೂ. ವಶ ಪಡಿಸಿಕೊಂಡಿದ್ದಾರೆ. ಪೊಲೀಸರನ್ನು ನೋಡಿ ತಪ್ಪಿಸಿಕೊಳ್ಳುವ ಭರದಲ್ಲಿ ಓರ್ವ ಹಳ್ಳಕ್ಕೆ ಬಿದ್ದು ಎರಡು ಕೈಗಳು ಮುರಿದಿದ್ದು, ಆತನಿಗೆ ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಎಂಬುದಾಗಿ ಮಾಹಿತಿ ತಿಳಿದು ಬಂದಿದೆ. ದಾಳಿ ವೇಳೆ ವಶಪಡಿಸಿಕೊಂಡ ಬೈಕ್ಗಳನ್ನು ದಾರಿ ಮಧ್ಯೆ ಪೊಲೀಸರು ಜೂಜುಕೋರರಿಗೆ ಶಾಮಿಲಾಗಿ ಬಿಟ್ಟು ಕಳುಹಿಸಿದ್ದಾರೆಂಬ ವಿಷಯ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.