ಜೂಜಾಡುತ್ತಿದ್ದ 7 ಜನರ ಬಂಧನ, ಬಿಡುಗಡೆ

arrest
Published on

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಏಳು ಜನರನ್ನು ಗ್ರಾಮಾಂತರ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಬೆಳಕವಾಡಿ ಗ್ರಾಮದ ಸಾಗರ್, ಸಿದ್ದು, ವಸಂತಕುಮಾರ್, ತಾಂಡವಮೂರ್ತಿ, ಲೋಕೇಶ್, ಶರತ್ ಕುಮಾರ್, ಮಹದೇವ ಬಂಧಿತ ಆರೋಪಿಗಳು. ಇವರು ಚಿಕ್ಕಲ್ಲೂರಿನ ಹಳೇ ಮಠದ ಸಮೀಪವಿರುವ ಸಾರ್ವಜನಿಕರ ರಸ್ತೆಯಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಗಣೇಶ್ ಹಾಗೂ ಸಿಬ್ಬಂದಿ ಜೊತೆದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ ಪಣಕ್ಕಿಟ್ಟಿದ್ದ 11,750 ರೂ. ನಗದ ಜಪ್ತಿ ಮಾಡಲಾಗಿದೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net