ಜೂಜಾಡುತ್ತಿದ 8 ಜನರ ಬಂಧನ

Published on

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಮೇಹಬೂಬ್​ ಷರೀಪ್​ ತೋಟದ ಮನೆಯಲ್ಲಿ ಇಸ್ಪೀಟ್​ ಆಟದಲ್ಲಿ ತೊಡಗಿದ್ದ 8 ಜನರನ್ನು ಬಂಧಿಸಿದ್ದಾರೆ. ಹೊಳವನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಪತಿ ಕುಮಾರ, ಉಪಾಧ್ಯಕ್ಷ ರಾಮು , ಮಾಜಿ ಸದಸ್ಯ ರಾಮಾಂಜನೇಯ ಜತೆ ಅಲೀಂವುಲ್ಲಾ, ರಮೇಶ್​, ರಾಮಕೃಷ್ಣ, ಚಾಂದು ಪಾಷಾ, ಹನುಮಂತರಾಜು ಬಂಧಿತರು. ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಸಿಪಿಐ ಅನಿಲ್​ ಮತ್ತು ಪಿಎಸೈ ಚೇತನ್​ ನೇತೃತ್ವದ ತಂಡ ದಾಳಿ ನಡೆಸಿ 8 ಜನ ಇಸ್ಪೀಟ್​ ಆಟದ ಆರೋಪಿಗಳಿಂದ 2 ಬೈಕ್​ ಮತ್ತು 1 ಲಕ್ಷದ 10ಸಾವಿರ ನಗದು ಪೊಲೀಸರ ವಶ ಪಡಿಸಿಕೊಂಡಿದ್ದಾರೆ. ಕೊರಟಗೆರೆ ಪೊಲೀಸ್​ ಠಾಣೆಯಲ್ಲಿ 8 ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net