ಜೂಜಾಟ ಖಂಡಿಸಿ ಪ್ರತಿಭಟನೆ

CTD 19 KARANAU VIJYASENE-0003
Published on

ಚಿತ್ರದುರ್ಗ: ಜೂಜಾಟ ಆರೋಪದಡಿ ಕಾನೂನು ಕ್ರಮ ಎದುರಿಸುತ್ತಿರುವ ಹಿರಿಯೂರು ನಗರಸಭೆ ಮೂವರು ಸದಸ್ಯರ ಸದಸ್ಯತ್ವ ರದ್ದುಗೊಳಿ ಸುವುದರೊಂದಿಗೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಜಿಲ್ಲಾಧಿ ಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕ್ಷೇತ್ರ ವ್ಯಾಪ್ತಿ ವಿವಿಪುರ ಪ್ರವಾಸಿ ಮಂದಿರದ ಮೇಲೆ ಪೊಲೀಸರು ದಾಳಿ ನಡೆಸಿ, ನಗರಸಭೆ ಸದಸ್ಯರಾದ ಅನಿಲ್,ಜಗದೀಶ್ ಹಾಗೂ ಅಜ್ಜಪ್ಪ ಸೇರಿದಂತೆ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಚುನಾಯಿತಿ ಪ್ರತಿನಿಧಿಗಳು ಜನ ಸೇವೆ ಬದಲು ಜೂಜಾಟದಲ್ಲಿ ತೊಡಗಿರುವುದು ಅಕ್ಷಮ್ಯ ಅಪರಾಧವೆಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತ ಪಡಿಸಿದರು.
ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ವೀಣಾಗೌರಣ್ಣ, ಗೋಪಿನಾಥ್, ಸಿ.ಜಗದೀಶ್,ರತ್ನಮ್ಮ, ನಾಗರಾಜ್ ಮುತ್ತು, ಅವಿನಾಶ್, ಮಹಮದ್‌ರಫಿ, ಶಾನ್,ಮಣಿ, ಹರೀಶ್ ಇತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net