ಜೂಜಾಟ ಒಂಬತ್ತು ಮಂದಿ ಬಂಧನ

Ispeet
Published on

ಚಿತ್ರದುರ್ಗ: ಜೂಜು ಅಡ್ಡೆಯ ಮೇಲೆ ಭಾನುವಾರ ದಾಳಿ ನಡೆಸಿದ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿ, 5.30 ಲಕ್ಷ ರೂ. ನಗದು, 11 ದ್ವಿಚಕ್ರ ವಾಹನ, 11 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಚೇರಿಯ ವಿಶೇಷ ವಿಭಾಗದ ಅಧಿಕಾರಿ, ಸಿಬ್ಬಂದಿ ದಾಳಿ ನಡೆಸಿ ಜೂಜಾಡುತ್ತಿದ್ದವರನ್ನು ಬಂಧಿಸಿದ್ದಾರೆ.

ವಿಭಾಗದ ಪ್ರಭಾರ ಪೊಲೀಸ್ ನಿರೀಕ್ಷಕ ಎನ್.ಗುಡಪ್ಪ, ಪಿಎಸ್‌ಐ ದಾದಪೀರ್, ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿ ಪ್ರದೀಪ್, ಮಧು, ಪ್ರವೀಣ, ಖದರ್‌ಬಾಷ, ಹರ್ಷ, ಭೀಮಣ್ಣ ಇನ್ನಿತರರ ತಂಡ ದಾಳಿ ನಡೆಸಿ, ದೀಪು (ದೀಪಕ್), ಮಲ್ಲಿಕಾರ್ಜುನ ಸೇರಿ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಗೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net