

ಬಾಗಲಕೋಟೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ದಲಿತ ಚಳುವಳಿ ಚೇತನ ಪ್ರೊ.ಬಿ.ಕೃಷ್ಣಪ್ಪರವರ ೮೬ ನೇ ಜಯಂತಿ ಹಾಗೂ ಪ್ರತಿಮೆ ಅನಾ ವರಣ ಮತ್ತು ರಾಜ್ಯ ಮಟ್ಟದ ಬೃಹತ್ ಸಮಾವೇಶ ಜೂ.೯ ರಂದು ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ಮಾದರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧.೩೦ ಗಂಟೆಗೆ ನವನಗರದ ಎಪಿಎಂಸಿ ಸರ್ಕಲ್ ಬಳಿ ಬುದ್ಧ ವಿಹಾರದಲ್ಲಿ ಪುತ್ಥಳಿ ಅನಾವರಣ ಗೊಳಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಮುರುಗೇಶ ನಿರಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಿಎಸ್‌ಎಸ್ ಭೀಮವಾದ ರಾಜ್ಯ ಸಂಚಾಲಕ ಎಂ.ಸಿ.ನಾರಾಯ ಣ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಧ್ವಜಾರೋಹಣ ನೆರವೇರಿಸುವರು. ಕ.ದ.ಸಂ.ಸ.ಭೀಮವಾದ ಸಂಸ್ಥಾಪಕರಾದ ಪರಶುರಾಮ ನೀಲನಾಯಕ ನಾಮಫಲಕ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ದಲಿತ ಚಳುವಳಿಯ ನೇತಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ರಾಜ್ಯದಲ್ಲಿ ಹುಟ್ಟು ಹಾಕಿ ದಲಿತ ಮೇಲೆ ನಡೆಯುವ ದೌರ್ಜನ್ಯವನ್ನು ಸಂಘಟನೆಗಳ ಮೂಲಕ ರಾಜ್ಯ ಸರ್ಕಾರದ ಮತ್ತು ದಲಿತರನ್ನು ಜಾಗೃತಗೊಳಿಸಿ ದಲಿತರಲ್ಲಿದ್ದ ಮೂಢನಂಬಿಕೆಗಳನ್ನು ಹೊಡೆದು ಹಾಕಿ, ಶಿಕ್ಷಣದ ಕಡೆಗೆ ಬರುವಂತೆ ಮಾಡಿರುವ ಅವರು ರಾಜ್ಯದಲ್ಲಿ ಕಾಂತ್ರಿಯನ್ನೇ ಮೊಳಗಿಸಿದ ಪ್ರೊ.ಕೃಷ್ಣಪ್ಪರವರು ಕರ್ನಾಟಕದ ಅಂಬೇಡ್ಕರ ಎಂದೆ ಹೆಸರು ವಾಸಿಯಾಗಿದ್ದಾರೆ ಎಂದರು.
ಮುಖಂಡರಾದ ಪಡಿಯಪ್ಪ ಕರೆಮನಿ, ಸಿಡ್ಲಪ್ಪ ಮಾದರ, ಮುತ್ತಣ್ಣ ಛಲವಾದಿ, ಆನಂದ ಪೂಜಾರಿ ಮತ್ತಿತರರು ಇದ್ದರು.