ಜೂ.9ರಿಂದ ಸುದರ್ಶನ ಮಹಾಯಾಗ

Published on

ಮೈಸೂರು: ಓ ವಿಶ್ವ ಮಹಾಗುರು ಭಗವಾನ್ ಕ್ಷೇತ್ರ ಚಾರಿಟಬಲ್ ಟ್ರಸ್ಟ್‌ನಿಂದ ಜೂ.9ರಿಂದ 11ರವರೆಗೆ ಶ್ರೀರಂಗಪಟ್ಟಣದ ರಂಗನಾಥ ದೇವಾಲಯ ಮುಂಭಾಗದ ಮೈದಾನದ ಆವರಣದಲ್ಲಿ ಸುದರ್ಶನ ಮಹಾಯಾಗ ಆಯೋಜಿಸಲಾಗಿದೆ ಎಂದು ಜ್ಯೋತಿಷಿ ಭಾನುಪ್ರಕಾಶ್ ಶರ್ಮ ತಿಳಿಸಿದರು.
ಲೋಕಕಲ್ಯಾಣಾರ್ಥವಾಗಿ ಆಯೋಜಿಸಿರುವ ಈ ಯಾಗದಲ್ಲಿ 150ಕ್ಕೂ ಹೆಚ್ಚು ಪುರೋಹಿತರು ಭಾಗವಹಿಸಲಿದ್ದಾರೆ. ಪಂಚನದಿಗಳಿಂದ ತಂದ 108 ಕುಳಶ, 11 ಹೋಮ ಕುಂಡಲಗಳನ್ನು ಸ್ಥಾಪಿಸಲಾಗಿದೆ. ಪ್ರತಿನಿತ್ಯವೂ ಪೂಜೆ, ಹೋಮ, ಪ್ರಸಾದ ವಿನಿಯೋಗ ಇರುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ, ಶೃಂಗೇರಿ ಮಠದ ಶ್ರೀಭಾರತಿ ತೀರ್ಥ ಸ್ವಾಮೀಜಿ, ಬೇಬಿ ಮಠದ ಶ್ರೀತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ನೀಲಗಿರಿ ಧ್ಯಾನಪೀಠದ ಶ್ರೀಭಾಸ್ಕರಾನಂದ ಗುರೂಜಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಆಯೋಜಕರಾದ ಮಧುಸೂದನ್, ಲಕ್ಷ್ಮೀ, ಮೋಹನ್ ವೇಲು, ಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net