ಜೂ.9ರಂದು ಡಾ. ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ

ಜೂ.9ರಂದು ಡಾ. ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ
Published on

ಹಾಸನ: ನಗರದ ಹೊರವಲಯದ ಗವೇನಹಳ್ಳಿ ಬೈ ಪಾಸ್ ರಸ್ತೆ ಬಳಿ ಇರುವ ಕಾಮಧೇನು ಸಹಕಾರಿ ವಿದ್ಯಾಶ್ರಮದ ಆವರಣದಲ್ಲಿ ಜೂನ್ 9ರ ಭಾನುವಾರದಂದು ಬೆಳಿಗ್ಗೆ 10.30ಕ್ಕೆ ಡಾ. ಹೆಬ್ಬಾರ್ ಆಲಯದ ನೂತನ ಕಟ್ಟಡ ಉದ್ಘಾಟನೆ ಮತ್ತು ದಿ. ಗುರುರಾಜು ಹೆಬ್ಬಾರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿದ್ಯಾಶ್ರಮದ ಅಧ್ಯಕ್ಷ ಎಂ. ಮಾಧವ ಶೆಣೈ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜ್, ಸಹಕಾರಿ ಸಂಘಗಳ ನಿರ್ದೇಶಕ ಎಚ್.ಸಿ. ಬಸವರಾಜ್, ಸಹಕಾರಿ ಸಂಘಗಳ ಉಪನಿರ್ದೇಶಕ ಜಿ.ಆರ್. ವಿಜಯಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಆರ್. ಅನುಪಮಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಿ. ಸಂತೋಷ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಎಚ್.ಪಿ. ಮೋಹನ್ ಇತರರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಮಧೇನು ಸಹಕಾರಿ ವಿದ್ಯಾಶ್ರಮದ ಉಪಾಧ್ಯಕ್ಷ ಮುತ್ತತ್ತಿ ರಾಜಣ್ಣ, ಖಜಾಂಚಿ ಎಚ್.ಡಿ. ಶಾಂತಿಪ್ರಸಾದ್, ನಿರ್ದೇಶಕರಾದ ಎಚ್.ಸಿ. ಆನಂದ್ ಬಾಗಡೆ, ಇಂದಿರಾ ಮೂರ್ತಿ, ಎಸ್.ಎಸ್. ಕೃಷ್ಣ ಅಯ್ಯಂಗಾರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net