ಜೂ.8, 9ರಂದು ಸಂಗೀತೋತ್ಸವ

d7fb4e3f-6d5a-4081-bb5d-3c801166a193
Published on

ಮೈಸೂರು: ಬ್ರಹ್ಮವಿದ್ಯಾ ಸಂಸ್ಥೆ ಮತ್ತು ವಿವಿಧ ಕಲಾ ಸಂಸ್ಥೆಗಳ ಸಹಯೋಗದೊಂದಿಗೆ ಭಾರತೀಯ ಸಂಗೀತ ಶಾಸ್ತ್ರ ದಿನಾಚರಣೆ ಮತ್ತು ಸಂಗೀತೋತ್ಸವ ಜೂ.8 ಮತ್ತು 9 ರಂದು ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

8ರಂದು ಸಂಜೆ 5.30ಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಕಾರ್ಯಕ್ರಮ ಉದ್ಘಾಟಿಸುವರು. ಸಂಗೀತ ವಿದ್ವಾನ್ ಡಾ.ವಿಶ್ವೇಶ್ವರನ್ ಅವರ ‘ಶ್ರೀಕಮಲಾಂಬಾ ಜಯಂತಿ’ (ವ್ಯಾಖ್ಯಾನ ಮತ್ತು ಸಂಗೀತ ಲಿಪಿ) ಮತ್ತು ಸಂಗೀತ ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ‘ಆರೋಹಿಣೀ’ ಎಂಬ ಸಂಗೀತನಾಟ್ಯ ಶಾಸ್ತ್ರ ಲೇಖನ ಸಂಕಲನ ಬಿಡುಗಡೆಗೊಳಿಸಲಾಗುತ್ತದೆ ಎಂದು ಸಂಸ್ಥೆಯ ರಾ.ಸಾ. ನಂದಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾಹಿತ್ಯಸೂರೀ ಪ್ರಶಸ್ತಿ’ಯನ್ನು ಹಿರಿಯ ಸಂಶೋಧಕ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ‘ಶಾಸ್ತ್ರಸೂರೀ ಪ್ರಶಸ್ತಿ’ಯನ್ನು ಭಾರತೀಯ ಶಾಸ್ತ್ರಜ್ಞ ಡಾ. ಜಿಯಾನ್ ಜುಸೆಫ್ ಫಿಲಿಪಿ, ‘ರಾ.ಸತ್ಯನಾರಾಯಣ ಪ್ರಶಸ್ತಿ’ಯನ್ನು ವಿದ್ವಾನರಾದ ಎಚ್.ಕೆ. ನರಸಿಂಹಮೂರ್ತಿ, ಮಧುಕರಂ ಪ್ರಶಾಂತ್ ಅಯ್ಯಂಗಾರ್, ಶೃಂಗೇರಿ ಎಚ್.ಎಸ್.ನಾಗರಾಜ್ ಅವರಿಗೆ ಪ್ರದಾನ ಮಾಡಲಾಗುತ್ತದೆ. ಬಳಿಕ ಮಧುಕರಂ ಪ್ರಶಾಂತ್ ಅಯ್ಯಂಗಾರ್ ಅವರಿಂದ ವೀಣಾವಾದನ ಜರುಗಲಿದೆ ಎಂದು ಮಾಹಿತಿ ನೀಡಿದರು.

9ರಂದು ಸಂಜೆ 6ಕ್ಕೆ ವಿದ್ವಾನ್ ಶೃಂಗೇರಿ ಎಚ್.ಎಸ್.ನಾಗರಾಜ್ ಅವರಿಂದ ಶಾಸ್ತ್ರೀಯ ಗಾಯನ ಕಛೇರಿ, ಡಾ.ರಾ.ವಿಶ್ವೇಶ್ವರನ್ ಅವರಿಂದ ಸಂಗೀತ ಕಛೇರಿ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net