ಕೊಳ್ಳೇಗಾಲ: ತಾಲೂಕಿನ ವ್ಯಾಪ್ತಿಯಲ್ಲಿ ಈವರೆಗೆ ಇ-ಕೆವೈಸಿ ಮಾಡಿಸದ ಮತ್ತು ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಯಲ್ಲಿ ಕೆಲಸ ನಿಮಿತ್ತ ತೆರಳಿರುವ ಪಡಿತರ ಚೀಟಿದಾರರು ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋದೃಢೀಕರಣ ಮಾಡಿಸಲು ಕೊಳ್ಳೇಗಾಲ ತಹಸೀಲ್ದಾರ್ ತಿಳಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಯ ಪಡಿತರ ಅಂಗಡಿಗಳಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಆದರೆ ಕೆಲವು ಪಡಿತರ ಚೀಟಿದಾರರು ಗ್ರಾಮದಲ್ಲಿ ವಾಸವಿಲ್ಲದೇ ವಲಸೆ ಹೋಗಿರುವುದು ಕಂಡುಬಂದಿರುವುದರಿಂದ ಇ-ಕೆವೈಸಿಯನ್ನು ಶೇ.100ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಜೂ.30ರವರೆಗೆ ಇಕೆವೈಸಿ ಮಾಡಿಸಲು ನಿಗದಿಪಡಿಸಲಾಗಿದೆ. ಇದುವರೆಗೆ ಇ-ಕೆವೈಸಿ ಮಾಡಿಸದ ಮತ್ತು ವಲಸೆ ಹೋಗಿ ಅಥವಾ ಬೇರೆ ಜಿಲ್ಲೆಯಲ್ಲಿ ಕೆಲಸ ನಿಮಿತ್ತ ತೆರೆಳಿರುವ ವ್ಯಕ್ತಿಗಳು ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಹೋಗಿ ಬಯೋದೃಢೀಕರಣ ಮಾಡಿಸಬೇಕು. ತಪ್ಪಿದಲ್ಲಿ ಇ-ಕೆವೈಸಿ ಆಗದ ಪಡಿತರ ಚೀಟಿಗಳಿಗೆ ಜುಲೈ ಮಾಹೆಯ ಆಹಾರ ಪದಾರ್ಥವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕೊಳ್ಳೇಗಾಲ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.