

ಹಾಸನ: ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಅಡಿಯಲ್ಲಿ ಹಸಿಶುಂಠಿ ಪ್ರತಿ ಕ್ವಿಂಟಾಲ್‌ಗೆ 2,445 ರೂ.ನಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ (ಮಾರ್ಕೆಂಟಿಂಗ್ ಫೆಡರೇಷನ್) ವತಿಯಿಂದ ಖರೀದಿಸಲಾಗುವುದು. ಜೂ.02ರಿಂದ ರೈತರ ನೋಂದಣಿ ಆರಂಭವಾಗಲಿದ್ದು, ಮೊದಲ ವಹಿವಾಟು ಆಗುವ ದಿನಾಂಕದಿಂದ 30 ದಿನಗಳವರೆಗೆ ನೋಂದಣಿ ಚಾಲ್ತಿಯಲ್ಲಿರುತ್ತದೆ. ರೈತರು ರಾಗಿ ಹಾಗೂ ಭತ್ತ ಖರೀದಿ ನಡೆಯುತ್ತಿರುವ ಒಟ್ಟು 22 ಕೇಂದ್ರಗಳಲ್ಲಿ ನೋಂದಣಿ ಮಾಡಿಸಬೇಕು. ಖರೀದಿ ಕೇಂದ್ರಗಳಲ್ಲಿ ಪ್ರೂಟ್ಸ್ ಐಡಿ ಮೂಲಕ ನೋಂದಾಯಿಸಿಕೊಳ್ಳಬಹುದು.
ಪ್ರತಿ ರೈತರಿಂದ ಎಕರೆಗೆ 30 ಕ್ವಿಂಟಾಲ್‌ನಂತೆ ಗರಿಷ್ಠ 60 ಕ್ವಿಂಟಾಲ್ ಹಸಿಶುಂಠಿಯನ್ನು ಖರೀದಿಸಲಾಗುವುದು. ರೈತರ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಉತ್ಪನ್ನದ ಮೌಲ್ಯವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಖರೀದಿ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರು ಪ್ರಕಟಣೆ ಮೂಲಿಕ ತಿಳಿಸಿದ್ದಾರೆ.