

ಹಾಸನ: ವಿನಯ್ ಪೇಡಿಯಾಟ್ರಿಕ್ ಮತ್ತು ಮಲ್ಟಿ ಸ್ಪೆಷಾಲಿಟಿ ಮಕ್ಕಳ ಆಸ್ಪತ್ರೆ ಇದೇ ಭಾನುವಾರ ಲೋಕಾರ್ಪಣೆಯಾಗಲಿದೆ ಎಂದು ಮುಖ್ಯಸ್ಥರಾದ ಮಕ್ಕಳ ತಜ್ಞ ಡಾ.ವಿನಯ್ ತಿಳಿಸಿದರು.
ಶಂಕರಮಠ ರಸ್ತೆ ಕೆ.ಆರ್.ಪುರಂ 2ನೇ ಕ್ರಾಸ್‌ನಲ್ಲಿ ಮೊದಲೇ ಇದ್ದ ಶಾರದಾ ನರ್ಸಿಂಗ್ ಹೋಂ ಆವರಣದಲ್ಲೇ ಉದ್ಘಾಟನೆಯಾಗುತ್ತಿರುವ ನಮ್ಮ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯಕೀಯ ಸೇವೆಗೆ ಪೂರಕವಾದ ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉತ್ತಮ ರೀತಿಯ ವೈದ್ಯರ ತಂಡದವರು ಸೇರಿ ಆಸ್ಪತ್ರೆ ನಡೆಸಲು ಮುಂದಡಿ ಇಡುತ್ತಿದ್ದೇವೆ. ಬೇರೆ ಬೇರೆ ಕಡೆಯಲ್ಲಿ ಇರುವಂತೆ ನಮ್ಮಲ್ಲಿ ಚಿಕಿತ್ಸೆ ದುಬಾರಿ ಇರುವುದಿಲ್ಲ. ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು. ಬದಲಾಗುತ್ತಿರುವ ಇಂದಿನ ಕಾಲಮಾನದಲ್ಲಿ ಎಳೆಯ ಮಕ್ಕಳಿಗೆ ತರೇಹೇವಾರಿ ರೋಗ-ರುಜಿನ ಕಾಣಿಸಿಕೊಳ್ಳುತ್ತಿವೆ. ಮಕ್ಕಳ ಜೀವ ಅಮೂಲ್ಯವಾದುದು, ಹೀಗಾಗಿ ಅವರಿಗಾಗಿಯೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬರೂ ನಮಗೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ಮೇನೇಜರ್ ಲಕ್ಷ್ಮೀಶ್, ಮೆಡಿಕಲ್ ಫಾರ್ಮಾ ರುದ್ರೇಶ್, ಸುದರ್ಶನ್ ಇದ್ದರು