ಜುಲೈ ೨ ನೇ ವಾರದಲ್ಲಿ ಸೆಪ್ಟೆಂಬರ್ ೧೦ ಚಲನಚಿತ್ರ ಬಿಡುಗಡೆ

bkt-24-5
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಓಂ ಸಾಯಿಪ್ರಕಾಶ್ ಸೆಪ್ಟೆಂಬರ್ ೧೦ ಚಲನಚಿತ್ರದ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿದರು. ಚಿತ್ರದ ಕಲಾವಿದ ಗಣೇಶರಾವ್ ಕೇಸರಕರ್, ಕೆಂಗುಲಾಬಿ ಚಿತ್ರದ ನಿರ್ಮಾಪಕ ಘನಶ್ಯಾಂ ಭಾಂಡಗೆ, ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಡಾ.ಶೇಖರ ಮಾನೆ, ಸಂಜೀವ ಜೋಶಿ, ಚಂದ್ರು ಇಲ್ಲೂರ ಇದ್ದರು.
Published on

ಬಾಗಲಕೋಟೆ: ಆತ್ಮಹತ್ಯೆಯೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬ ವಿಷಯವನ್ನು ಇಟ್ಟುಕೊಂಡು ನಿರ್ಮಿಸಿರುವ ಸೆಪ್ಟೆಂಬರ್-೧೦ ಕನ್ನಡ ಚಲನಚಿತ್ರ ಜುಲೈ ೨ನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕುಟುಂಬ ಸಮೇತ ಕುಳಿತು ವೀಕ್ಷಿಸುವ ಕನ್ನಡ ಚಿತ್ರವಾಗಿದೆ ಎಂದು ಚಿತ್ರದ ನಿರ್ದೇಶಕ ಓಂ ಸಾಯಿಪ್ರಕಾಶ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರ್ಬಲ ಹಾಗೂ ಸಂಕುಚಿತ ಮನಸ್ಸಿನವರಿಗೆ ಉತ್ತಮ ಸಂದೇಶ, ಮಾರ್ಗದರ್ಶನ ನೀಡುವ ಪ್ರಯತ್ನ ಈ ಚಿತ್ರದಲ್ಲಿದೆ ಎಂದರು.

ಬೆಳೆನಷ್ಟ, ಸಾಲದ ಸುಳಿಗೆ ಸಿಕ್ಕ ರೈತ ಆತ್ಮಹತ್ಯೆ, ಸಮಾಜ ಎದುರಿಸಲಾಗದೇ ಪ್ರೇಮಿಗಳ ಆತ್ಮಹತ್ಯೆ, ವ್ಯವಹಾರದಲ್ಲಿ ನಷ್ಟ ಅನುಭವಿಸಿ ವ್ಯಾಪಾರಿಗಳು, ಪರೀಕ್ಷೆ ಎದುರಿಸಲಾಗದ ವಿದ್ಯಾರ್ಥಿಗಳು, ಪೋಷಕರು ನಿರೀಕ್ಷಿಸಿದ ಅಂಕಗಳಿಸದ ಮಕ್ಕಳ ಆತ್ಮಹತ್ಯೆ ಈ ಐದು ಪ್ರಮುಖ ಅಂಶಗಳ ಮೇಲೆ ಸೆಪ್ಟಂಬರ್ ೧೦ ಸಿನಿಮಾದ ಚಿತ್ರಕಥೆ ಹೆಣೆಯಲಾಗಿದೆ. ಅದಕ್ಕೆಲ್ಲ ಮನೋವೈದ್ಯರ ಮೂಲಕ ಪರಿಹಾರದ ಮಾರ್ಗವನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.

ಚಿತ್ರದಲ್ಲಿ ಹಿರಿಯ ಕಲಾವಿದ ರಮೇಶ್ ಭಟ್, ನಟ ಶಶಿಕುಮಾರ್, ಶ್ರೀನಿವಾಸಮೂರ್ತಿ, ರವೀಂದ್ರನಾಥ, ಚಿತ್ರದ ವಿಲನ್ ಗಣೇಶರಾವ್ ಕೇಸರಕರ, ಸಿಹಿಕಹಿ ಚಂದ್ರು, ಮೀಸೆ, ಚಿತ್ರದ ನಾಯಕರಾಗಿ ಜಯಸಿಂಹ, ಪದ್ಮಾ ವಾಸಂತಿ, ಶ್ರೀರಕ್ಷಾ, ಅನಿತಾರಾಣಿ ಅನುಭವಿ ಕಲಾವಿದರನ್ನು ಹಾಕಿಕೊಂಡು ಚಿತ್ರವನ್ನು ನಿರ್ಮಿಸಲಾಗಿದೆ. ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಚಿತ್ರದ ನಾಯಕ ಜಯಸಿಂಹ ಮಾತನಾಡಿ, ಕೃಷಿಕನ ಮಗ ಕೃಷಿಕನಾಗಬೇಕು, ಶ್ರೀಮಂತಳ ಮಗಳನ್ನು ಪ್ರೀತಿ ಮಾಡಿದಾಗ ಮುಂದೆ ಆಗುವ ಸಮಸ್ಯೆಗಳು ಯಾವ ರೀತಿ, ಆತ್ಮಹತ್ಯೆ ಮಾಡಿಕೊಳ್ಳಬೇಕು ಬೇಡವೋ ಎಂಬ ವಿಷಯಗಳು ಚಿತ್ರದಲ್ಲಿದ್ದು, ಕುಟುಂಬದವರೆಲ್ಲ ಸೇರಿಕೊಂಡು ಚಿತ್ರವನ್ನು ನೋಡಬಹುದು ಅಷ್ಟೊಂದು ಒಳ್ಳೆಯ ಚಿತ್ರ ಇದಾಗಿದೆ, ಕನ್ನಡ ಚಿತ್ರಗಳನ್ನು ನೋಡಿ, ಪ್ರೋತ್ಸಾಹಿಸಿ, ಕಲಾವಿದರನ್ನು ಬೆಳೆಸಬೇಕು ಎಂದು ಹೇಳಿದರು.

ಬಾಗಲಕೋಟೆಯ ಡಾ.ಶೇಖರ ಮಾನೆ ಮಾತನಾಡಿ, ಅನೇಕ ಚಿತ್ರಗಳು, ಗಿಡ ಸುತ್ತಿ ಹಾಡುವುದು, -ೆÊಟಿಂಗ್, ಗುಂಡೂಗಳನ್ನು ವೈಭವೀಕರಿಸುವ ಹೆಚ್ಚಾಗಿ ಚಿತ್ರಗಳು ತೆರೆಗೆ ಬರುತ್ತವೆ. ಸಮಾಜದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಹಾಗೂ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪ್ರಮುಖ ಪರಿಹಾರವಲ್ಲ ಎಂಬ ವಿಷದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಚಿತ್ರವನ್ನು ಹೆಣೆದಿರುವ ಓಂ ಸಾಯಿಪ್ರಕಾಶ ನಿರ್ದೇಶನದ ಸೆಪ್ಟೆಂಬರ್ ಚಿತ್ರವನ್ನು ಪ್ರೋತ್ಸಾಹಿಸಬೇಕು ಎಂದು ಕೇಳಿಕೊಂಡರು.

ಚಿತ್ರದ ಕಲಾವಿದ ಗಣೇಶರಾವ್ ಕೇಸರಕರ್, ಕೆಂಗುಲಾಬಿ ಚಿತ್ರದ ನಿರ್ಮಾಪಕ ಘನಶ್ಯಾಂ ಭಾಂಡಗೆ, ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಸಂಜೀವ ಜೋಶಿ, ಚಂದ್ರು ಇಲ್ಲೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net