ಜುಲೈ .6ರಿಂದ ಡಿಜೈರ್ ಫೆಸ್ಟ್

Published on

ಬಳ್ಳಾರಿ : ನಗರದ ಅಲ್ಲಂಭವನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಜಯವಾಣಿ ದಿನಪತ್ರಿಕೆ ಸಹಯೋಗದೊಂದಿಗೆ ಜು. 6 ಮತ್ತು 7 ರಂದು ಡಿಜೈರ್ ಫೆಸ್ಟ್ ಆಯೋಜಿಸಿದ್ದು, ವಿವಿಧ ರಾಜ್ಯಗಳ ಮಹಿಳಾ ಉದ್ಯಮಿಗಳು ಭಾಗವಹಿಸಲಿದ್ದಾರೆ. ಬೆಂಗಳೂರಿನ ಉದ್ಯಮಿ ಜೆ.ಎಸ್. ಮೋಟಾರಯಾಡ್ ಅವರು ಬಿಎಂಡಬ್ಲೂ ದಿಚಕ್ರ ಬೈಕ್ ಹಾಗೂ ಷರ್ಟ, ಜಾಕೆಟ್ ಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಇಡಲಿದ್ದಾರೆ.
ಕೊಯಮತ್ತೂರಿನ ಕೀರ್ತಿ ಲಾಲ್ ಡೈಮೆಂಡ್ಸ್ ಗಳ ಮಾರಾಟ ಮೇಳ ಆಯೋಜಿಸಿದ್ದು. ಖರೀದಿಯಲ್ಲಿ ಶೇ.15 ರಿಯಾಯಿತಿ ನೀಡಲಾಗುವುದು. ಅಲ್ಲದೆ ಕೊಲ್ಲಾಪುರಿಯ ಮಿಸಾಲ್ ಪಾವ, ಸಾಬುದಾನ ವಡಾ, ಮೋದಕ, ಶ್ರೀಖಂಡ, ಬಕರವಾದ, ಬಾಡಂಗ, ಪಾನಿಪುರಿ ಹಾಗೂ ಪಾವ ಬಾಜಿ ಅಡುಗೆಯ ತಿನಿಸುಗಳ ತಯಾರಿಸಲಾಗುತ್ತಿದ್ದು, ಆಹಾರ ಪ್ರಿಯರು ಹಣ ಪಾವತಿಸಿ ರುಚಿ ಸವಿಯಬಹುದು. ಜು.6 ರಂದು ಸಂಜೆ 4 ಗಂಟೆಗೆ ಜೂನಿಯರ ಮಾಸ್ಟರ್ ಚೆಫ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಾದವರಿಗೆ ಮೊದಲ ಬಹುಮಾನ ಪ್ಯಾನಸೋನಿಕ್ ವ್ಯಾಕ್ಯೂಮ ಕ್ಲೀನರ್, ದ್ವಿತೀಯ ಎಲೆಕ್ಟಿಕಲ್ ರೈಸ್ ಕುಕ್ಕರ್ ವಿತರಿಸಲಾಗುತ್ತದೆ. ಜುಲೈ 7ರಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮಾಸ್ಟರ್ ಚೆಫ್ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಾದವರಿಗೆ ಮೊದಲ ಬಹುಮಾನ ಪ್ಯಾನ ಸೋನಿಕ್ ವ್ಯಾಕ್ಯೂಂ ಕ್ಲೀನರ್, ಎರಡನೇ ಬಹುಮಾನ ಎಲೆಕ್ಟಿಕಲ್ ರೈಸ್ ಕುಕ್ಕರ್ ನೀಡಿ ಗೌರವಿಸಲಾಗುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net