ಜು.೪ರಂದು ಮಾಳಿ ಪ್ರತಿಭಾ ಪುರಸ್ಕಾರ

28Ainapur1
Published on

ಐನಾಪುರ: ಅಥಣಿ ತಾಲೂಕು ಮಾಳಿ ಸಮುದಾಯದ, ಶ್ರೀ ಮಹಾತ್ಮ ಜ್ಯೋತಿಬಾ ಫುಲೆ ಮಾಳಿ ಸಮುದಾಯ ಯುವಕ ಸಂಘ ಹಾಗೂ ಫುಲೆ ಬ್ರಿಗೇಡ್ ಸಂಯುಕ್ತಾಶ್ರಯದಲ್ಲಿ ಜು.೬ರಂದು ರಾಜ್ಯಮಟ್ಟದ ಮಾಳಿ (ಮಾಲಗಾರ) ಸಮುದಾಯದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಅಥಣಿ ಮಹಾತ್ಮ ಜ್ಯೋತಿಬಾ ಫುಲೆ ಮಾಳಿ ಸಮುದಾಯ ಯುವಕ ಸಂಘದ ಅಧ್ಯಕ್ಷ ಗಿರೀಶ ದಿವಾನಮಳ ತಿಳಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಈಚೆಗೆ ಪ್ರಚಾರ ಪ್ರತಿಕೆ ಬಿಡುಗಡೆಗೊಳಿಸಿ ಮಾತನಾಡಿ, ಜು.೬ರಂದು ಅಥಣಿ ಗಚ್ಚಿನಮಠದ ಸಭಾಭವನದಲ್ಲಿ ಬೆಳಗ್ಗೆ ೧೦ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ೨೦೨೪-೨೫ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೮೫ ಹಾಗೂ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಾಳಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.

ವಿವಿಧ ಕ್ಷೇತ್ರದ ಉನ್ನತ ಅಧಿಕಾರಿಗಳಿಗೆ ಹಾಗೂ ಸಮುದಾಯಕ್ಕೆ ಸೇವೆ ಸಲ್ಲಿಸಿದ ಗಣ್ಯರನ್ನು ಸತ್ಕರಿಸಿ ಗೌರವಿಸಲಾಗುವುದು. ಸಮುದಾಯದ ವಿದ್ಯಾರ್ಥಿಗಳು ಜು.೪ರ ಒಳಗಾಗಿ ಹೆಸರು ನೋಂದಾಯಿಸಬೇಕು.

ಗಜ್ಜಿನಮಠದ ಶಿವಬಸವ ಸ್ವಾಮೀಜಿ, ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುಭಾಷ ಮಾಳಿ, ಸುರೇಶ ಕಾಗಲಿ, ರವಿ ಬಡಕಂಬಿ, ಮಹಾದೇಶ ಚಮಕೇರಿ, ಶ್ರೀಶೈಲ ನಾಂದನೀಕರ, ಮಾರುತಿ ಜೀರಗಾಳೆ, ಬಸವರಾಜ ತೇರದಾಳ, ರಮೇಶ ಮಾಳಿ, ಶಿವಾನಂದ ಬೆಳಕೂಡ, ಪ್ರಶಾಂತ ತೋಡಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net