ಜು.30ರಂದು ದುರ್ಗದಲ್ಲಿ ಕಲೋತ್ಸವ

PHOTO-1--01
Published on

ಚಿತ್ರದುರ್ಗ: ಶಿಕ್ಷಣದೆಡೆ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ನಗರದಲ್ಲಿ ಜು.30ರಂದು ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯದ ಜಿಲ್ಲಾಮಟ್ಟದ ಶಿಕ್ಷಣ,ಸಾಹಿತ್ಯ,ಸಾಂಸ್ಕೃತಿಕ ಕಲೋತ್ಸವ ಏರ್ಪಡಿಸಲಾಗಿದೆ ಎಂದು ರಾಜ್ಯಅಲೆ ಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಒಕ್ಕೂಟದ ಗೌರವಾಧ್ಯಕ್ಷ ಮಹಾಲಿಂಗಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಬೆಳಗ್ಗೆ 10.30ಕ್ಕೆ ನಗರದ ಕ್ರೀಡಾಭವನದಲ್ಲಿ ಆಯೋಜಿಸಿ ರುವ ಈ ಕಾರ‌್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ವಹಿಸಲಿದ್ದಾರೆ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ,ಶಾಸಕರು,ಅಧಿಕಾರಿಗಳು ಹಾಗೂ ರಾಜ್ಯಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ನಾಗಪ್ಪ ವಾಸ್ಟರ್ ಮತ್ತಿತರರು ಉಪಸ್ಥಿತರಿರುವ ಉತ್ಸವವನ್ನು ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಉದ್ಘಾಟಿಸ ಲಿದ್ದಾರೆ.

ಎಸ್ಸೆಸ್ಸೆಲ್ಸಿ,ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ಸಮುದಾಯದ ವಿದ್ಯಾರ್ಥಿಗಳು,ಕಲೆ ಸಾ ಂಸ್ಕೃತಿಕ ಸಮಾಜಸೇವೆ,ಅಂತಾರಾಷ್ಟ್ರೀಯ ಕ್ರೀಡಾ ವಿಜೇತರನ್ನು ಗೌರವಿಸಲಾಗುವುದು. ಶಿಕ್ಷಣಕ್ಕೆ ಅಗತ್ಯವಿರುವ ಹಾಸ್ಟೆಲ್ ಮತ್ತಿತರ ಮೂ ಲ ಸೌಕರ್ಯಗಳೆಡೆ ಸಮುದಾಯದ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಉತ್ಸವದ ಉದ್ದೇಶವಾಗಿದೆ ಎಂದರು.

ರಾಜ್ಯಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯಗಳ ಒಕ್ಕೂಟದ ಪ್ರಧಾನ ಕಾರ‌್ಯದರ್ಶಿ ಒ.ಪ್ರತಾಪ್‌ಜೋಗಿ ಮಾತನಾಡಿ,ಜಿಲ್ಲೆ ಯಲ್ಲಿ ಪ್ರಥಮವಾಗಿ ಕಲೋತ್ಸವ ಏರ್ಪಡಿಸಲಾಗಿದೆ ಎಂದರು. ಒಕ್ಕೂಟ ಪದಾಧಿಕಾರಿಗಳಾದ ಜ್ಯೋತಿ,ಎಸ್.ಆರ್.ಇಂದಿರಾಗುರುಸ್ವಾ ಮಿ,ಕುಬೇಂದ್ರಪ್ಪದಾಸರ್,ಹೆಂಜಾರಪ್ಪ,ಚಿಕ್ಕಣ್ಣ,ಎಸ್.ಲಕ್ಷ್ಮೀಕಾಂತ್ ಇದ್ದರು.

(ಸಿಟಿಡಿ 28 ಮಹಾಲಿಂಗಪ್ಪ) ಮಗ್‌ಶಾಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net