

ಹಾಸನ: ಜಿಲ್ಲಾ ಬ್ರಾಹ್ಮಣ ಸಭಾದ ವತಿಯಿಂದ ಜು.21 ರಿಂದ ಸೆ.18ರ ವರೆಗೂ ಪರಮಪೂಜ್ಯ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮೀಜಿ ಅವರ ಚಾತುರ್ಮಾಸ್ಯ ವ್ರತ ಆಯೋಜಿಸಲಾಗಿದೆ ಎಂದು ಜಿಲ್ಲಾ ಬ್ರಾಹ್ಮಣ ಸಭಾದ ನೂತನ ಅಧ್ಯಕ್ಷ ಎಚ್.ಎಸ್. ಮಂಜುನಾಥ ಮೂರ್ತಿ ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಸಭಾದ ಆಡಳಿತ ಮಂಡಳಿಯು ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಸಂನ್ಯಾಸ ಸ್ವೀಕಾರದ ಸುವರ್ಣ ವರ್ಷದ ಹಿನ್ನೆಲೆಯಲ್ಲಿ ಚಾತುರ್ಮಾಸ್ಯ ವ್ರತ ಆಯೋಜಿಸಲು ನಿಶ್ಚಯಿಸಿದೆ.ಈ ಹಿನನ್ನಲೆಯಲ್ಲಿ ಜು.20 ರಂದು ಸಂಜೆ 5.3ಕ್ಕೆ ಆದೋನಿಯ ಯಾದವಗಿರಿಯ ಶ್ರೀ ವಿದ್ಯಾಭಿನವ ಸುಬ್ರಹ್ಮಣ್ಯ ಭಾರತೀ ಮಹಾಸ್ವಾಮೀಜಿ ಅವರು ಆಗಮಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿದಿನ ಬೆಳಿಗ್ಗೆ ಶ್ರೀಗಳಿಂದ ಚಂದ್ರಮೌಳೀಶ್ವರ ಪೂಜೆ, ಭಿಕ್ಷಾವಂದನೆ ಹಾಗೂ ಪಾದಪೂಜೆ ನಡೆಯುತ್ತದೆ. ಸಂಜೆ ಶ್ರೀಗಳಿಂದ ಸಂಧ್ಯಾರಾಧನೆ, ಚಂದ್ರಮೌಳೀಶ್ವರ ಪೂಜೆ, ಶ್ರೀ ಚಕ್ರಾರ್ಚನೆ ಇರುತ್ತದೆ. ಈ ನಡುವೆ ಭಜನೆ, ಸಂಗೀತ, ಉಪನ್ಯಾಸ ಕಾಯಕ್ರಮ ನಡೆಯಲಿದೆ ಎಂದು ಹೇಳಿದರು. ಈ ಗುರುಸೇವಾ ಕೈಂಕರ್ಯದಲ್ಲಿ ಹಾಸನದ ಸಮಸ್ತ ಗುರುಭಕ್ತರೂ ಚಾತುರ್ಮಾಸ್ಯ ಪಯರ್ಂತ ಭಾಗಿಯಾಗಿ ಗುರುಕೃಪೆಗೆ ಪಾತ್ರರಾಗಬೇಕು ಜೊತೆಗೆ ತನು-ಮನ-ಧನ, ಧವಸ ಧಾನ್ಯ ನೀಡುವುದರ ಮೂಲಕ ಕೈಜೋಡಿಸಿ ಸಹಕರಿಸಬೇಕಾಗಿ ಚಾತುರ್ಮಾಸ್ಯ ವ್ರತಾಚರಣೆ ಸಂಚಾಲನಾ ಸಮಿತಿ ಎಲ್ಲರಲ್ಲೂ ಮನವಿ ಮಾಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಎಚ್.ಕೆ. ಗುರುಮೂರ್ತಿ, ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಂಚಾಲಕ ವೆಂಕಟೇಶ್, ಕಾರ್ಯದರ್ಶಿ ಜಿ. ಸುರೇಶ್, ಜಂಟಿ ಕಾರ್ಯದರ್ಶಿ ಎನ್. ಸುಧೀಂದ್ರ, ಖಜಾಂಚಿ ಮಂಜುನಾಥ್, ಬಾಲಸುಬ್ರಮಣ್ಯ ಪ್ರಸಾದ್ ಹಾಜರಿದ್ದರು.