ಜು. 12ರಂದು ರಾಷ್ಟ್ರೀಯ ಲೋಕ ಅದಾಲತ್

CTD PRESS MEET JUDGE---
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಜು.12ರಂದು ನಡೆಯುವ ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ವೈವಾಹಿಕ ಪ್ರಕರಣಗಳ ಸುಖಾಂತ್ಯಕ್ಕೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 838 ವಿಚ್ಛೇದನ ಹಾಗೂ 668ಜೀವನಾಂಶ ಕೋರಿಕೆ ಪ್ರಕರಣಗಳು ಬಾಕಿ ಇವೆ. ಕಳೆದ ಬಾರಿ ಅದಾಲತ್‌ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 14 ಜೋಡಿಗಳನ್ನು ಪುನಃ ಒಗ್ಗೂಡಿಸಲಾಗಿದೆ.

ಈ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇವುಗಳೊಂದಿಗೆ ಜೀವನಾಂಶ ಕೋರಿಕೆ, ಕೌಟುಂ ಬಿಕ ದೌರ್ಜನ್ಯ, ವರದಕ್ಷಿಣಿ ಪ್ರಕರಣಗಳು ತಳಕು ಹಾಕಿಕೊಂಡಿರುತ್ತವೆ. ವಿಚ್ಛೇದನ ಪ್ರಕರಣದಲ್ಲಿ ಸತಿ, ಪತಿ ಒಂದು ಮಾಡುವುದರಿಂದ ಈ ಪ್ರಕರಣಗಳು ಕೂಡ ವಿಲೇವಾರಿಯಾಗುತ್ತವೆ ಎಂದು ತಿಳಿಸಿದರು.

ಕಳೆದ ಅದಾಲತ್‌ನಲ್ಲಿ ಚಾಲ್ತಿಯಲ್ಲಿದ್ದ 4575 ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಬಾಕಿ ಪ್ರಕರಣಗಳ ಪೈಕಿ ಶೇ.10 ಹೊರೆ ಕಡಿಮೆ ಯಾಗಿದೆ. 1,06,249 ವ್ಯಾಜ್ಯಪೂರ್ವ ಪ್ರಕರಣಗಳೂ ವಿಲೇ ಆಗಿವೆ. 2025ರ ಜೂನ್ 1ರಂತೆ ಜಿಲ್ಲೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯ ಸಹಿತ 46,515 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. 12ರಂದು ನಡೆಯಲಿರುವ ಬೃಹತ್ ಅದಾಲತ್‌ನಲ್ಲಿ 4ರಿಂದ 5 ಸಾವಿರ ಪ್ರಕರಣಗಳ ವಿಲೇ ಗುರಿ ಇದೆ. ಈಗಾಗಲೇ 2588 ಪ್ರಕರಣಗಳನ್ನು ವಿಲೇವಾರಿಗೆ ಗುರುತಿಸಲಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯಗಳ ಸಂಖ್ಯೆ ಇಲ್ಲ. ನ್ಯಾಯಾಧೀಶರು ಹೆಚ್ಚುವರಿ ಹೊಣೆಯನ್ನು ನಿರ್ವಹಿಸುವ ಂತಾಗಿದೆ. ಜಿಲ್ಲೆಯಲ್ಲಿ 293 ಕ್ರಿಮಿನಲ್ ಕಾಂಪೌಡಬಲ್, 4,848 ಚೆಕ್‌ಅಮಾನ್ಯ, 838 ವಿವಾಹ ವಿಚ್ಚೇಧನ, 348 ವರದಕ್ಷಿಣೆ, 668 ಜೀವನಾಂಶ, 4046 ಆಸ್ತಿ ವಿಭಾಗ, 1596 ಬ್ಯಾಂಕ್, 758 ಹಣ ವಸೂಲಾತಿ, 2686 ವಾಹನ ಅಪಘಾತ, 118 ನೌಕರರ ಪರಿಹಾರ, 12ಕಾರ್ಮಿಕ, ವಿದ್ಯುತ್ ಕಾಯ್ದೆ, 138 ಗಣಿ ಮತ್ತು ಖನಿಜ, 1476 ಭೂಸ್ವಾಧೀನ, 822 ಪರಿಹಾರ, 835 ಅರಣ್ಯ, 96 ಭೂ ಅಧಿಗ್ರಹಣ, 415 ವಾಹನ ಅಧಿಗ್ರಹಣ, 3496 ಇತರೆ ಅಧಿಗ್ರಹಣ, 9087 ಇತರೆ ಸಿವಿಲ್ ಪ್ರಕರಣಗಳು, 1691 ಜನನ ಹಾಗೂ ಮರಣ, 1405 ಪಿಟಿ ಕೇಸ್, 6045 ಕ್ರಿಮಿನಲ್, 4792 ನಾನ್ ಕಾಂಪೌಡಬಲ್ ಪ್ರಕರಣ ಸೇರಿ ಒಟ್ಟು 46515 ಪ್ರಕರಣಗಳು ಬಾಕಿ ಇವೆ. ಕಕ್ಷಿಗಾರರು ಶೀಘ್ರ ನ್ಯಾಯಕ್ಕಾಗಿ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಧಿಕಾರದ ಪ್ರಯತ್ನದಿಂದಾಗಿ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ. ಈ ಪ್ರಕರಣಗಳ ಸಂಖ್ಯೆ ಕಡಿ ತಗೊಳಿಸುವುದು ಗುರಿಯಾಗಿದೆ. ಕೋರ್ಟ್ ಆವರಣದಲ್ಲಿ ಹೊಸದಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜಪ್ತು ವಾಹನಗಳ ವಿಲೇಗೂ ಕ್ರಮ ವಹಿಸಲಾಗಿದೆ. ಕಕ್ಷಿದಾರರು ನೇರ ಅಥವಾ ವಕೀಲರ ಮೂಲಕ ಅದಾಲತ್‌ನಲ್ಲಿ ಭಾಗವಹಿಸಬಹುದು. ಸಾರ್ವಜನಿಕರು ಲೋಕ ಅ ದಾಲತ್ ಕುರಿತು ಹೆಚ್ಚಿನ ಮಾಹಿತಿಗಾಗಿ 9141193935/08194-222322 ಸಂಪರ್ಕಿಸುವಂತೆ ನ್ಯಾಯಾಧೀಶರು ಹೇಳಿದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಇದ್ದರು.

(ಸಿಟಿಡಿ 9 ಜಡ್ಜ್)

ರಾಷ್ಟ್ರೀಯ ಲೋಕ ಆದಾಲತ್ ಕುರಿತಂತೆ ಚಿತ್ರದುರ್ಗದಲ್ಲಿ ಸೋಮವಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ವಿಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net