

ಕುಕನೂರು: ಸಾಲ ಮಾಡಿ ಮದುವೆಯಾಗುವ ಬದಲು ಸಾಮೂಹಿಕ ವಿವಾಹವಾದಲ್ಲಿ ಸಾಲದ ಹೊರೆ ತಪ್ಪಲಿದೆ ಎಂದು ಶಿವಶರಣ ಗದಿಗೆಪ್ಪಜ್ಜ ಹೇಳಿದರು.
ತಾಲೂಕಿನ ಶಿರೂರು ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಹಾಗೂ ಮಲಿಯಮ್ಮ ದೇವಿ ಜಾತ್ರಾ ಮಹೋತ್ಸವ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವ ನಿಮಿತ್ತ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು.
ಸಮಾಜದಲ್ಲಿ ಸತ್ಕಾರ್ಯ ಮಾಡುವವರಿಗಿಂತ ಪಾಪದ ಕಾರ್ಯ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಮಾನವ ಜನ್ಮ ತಳೆದ ಪ್ರತಿಯೊಬ್ಬ ಜೀವಿಯೂ ತನ್ನ ಜೀವಿತಾವಧಿಯಲ್ಲಿ ಸತ್ಕಾರ್ಯಗಳನ್ನು ಮಾಡಿ ಪುಣ್ಯದ ಮಾರ್ಗದೆಡೆಗೆ ಸಾಗಬೇಕು ಎಂದರು.
ಇಸ್ಲಾಂ ಧರ್ಮಗುರು ಸೈಯದ್ ನಿಜಾಮುದ್ದೀನ್ ಷಾ ಮಾತನಾಡಿ, ಸಾಮೂಹಿಕ ವಿವಾಹ ಎಂದರೆ ಬಡ ಜನರ ಮದುವೆಗಳಲ್ಲ. ಅವು ಭಾಗ್ಯವಂತರ ವಿವಾಹಗಳು. ಪವಿತ್ರ ಧಾರ್ಮಿಕ ಕ್ಷೇತ್ರವಾದ ಶಿರೂರಿನಲ್ಲಿ ಸರ್ವ ಸಮಾಜದವರು ಒಗ್ಗೂಡಿ ಇಂತಹ ಕಲ್ಯಾಣ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಮುಖರಾದ ಹುಸೇನ ಸಾಹೇಬ ನಿಡಗೋಳ, ಬಸವರಾಜ ಪೂಜಾರ, ಹುಚ್ಚಪ್ಪ ಪೂಜಾರ, ಪ್ರಮುಖರಾದ ಶಿವಬಸಯ್ಯ ಮುತ್ತಿನಪೆಂಡಿಮಠ, ಈಶಪ್ಪ ಶಿರೂರು, ಎಚ್.ಎನ್. ಬಡಿಗೇರ, ಚಿನ್ನಪ್ಪ ತಳವಾರ, ಶಂಕರಗೌಡ ಹಾಳಕೇರಿ, ಶ್ರೀಧರ ಬಡಿಗೇರ, ಲಕ್ಷ್ಮಣ ಹೊಸಮನಿ, ವೀರೇಂದ್ರ, ರವಿ ಹಿರೇಮನಿ, ದೇವೇಂದ್ರಪ್ಪ ವಾಲ್ಮೀಕಿ, ಮುತ್ತಣ್ಣ ಬಾರಿನ ಇತರರಿದ್ದರು.