ಜೀವಾಮೃತ ತಯಾರಿಕೆ ವಿಧಾನ ಪ್ರಾತ್ಯಕ್ಷಿಕೆ

ಜೀವಾಮೃತ ತಯಾರಿಕೆ ವಿಧಾನ ಪ್ರಾತ್ಯಕ್ಷಿಕೆ
Published on

ಹಾಸನ: ಹಾಸನ ತಾಲೂಕಿನ ದುದ್ದ ಹೋಬಳಿಯ ಜೋಡಿಕೃಷ್ಣಾಪುರ ಗ್ರಾಮದಲ್ಲಿ ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್‌ಸಿ ವಿದ್ಯಾರ್ಥಿಗಳು ಮಣ್ಣಿನಲ್ಲಿ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಸಹಕಾರಿಯಾಗುವ ಜೀವಾಮೃತ ತಯಾರಿಕೆ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ಹಳ್ಳಿಯ ಜನರಿಗೆ ವಿವರಿಸಿದರು.
50 ಲೀಟರ್ ನೀರಿಗೆ 2.5 ಕೆಜಿ ಸಗಣಿ, 2.5 ಲೀಟರ್ ಗಂಜಲ, 500 ಗ್ರಾಂ ಕಪ್ಪು ಬೆಲ್ಲ, 500 ಗ್ರಾಂ ದ್ವಿದಳ ಧಾನ್ಯದ ಹಿಟ್ಟು ಹಾಗೂ 1-2 ಹಿಡಿ ಕೆಂಪು ಮಣ್ಣನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಮಿಶ್ರಣವನ್ನು 7 ರಿಂದ 11 ದಿನಗಳ ಕಾಲ ನೆರಳಿನಲ್ಲಿ ಇಟ್ಟು, ದಿನಕ್ಕೆ ಎರಡು ಬಾರಿಯಂತೆ ವೃತ್ತಾಕಾರವಾಗಿ ಕೋಲಿನಿಂದ ತಿರುಗಿಸಬೇಕು. ಮಣ್ಣಿನಲ್ಲಿ ತೇವಾಂಶವಿರುವ ಸಮಯದಲ್ಲಿ ಬಹುವಾರ್ಷಿಕ ಬೆಳೆಗಳಿಗೆ 2 ಅಡಿ ಅಂತರದಲ್ಲಿ ಹಾಗೂ ಅಲ್ಪಾವಧಿ ಬೆಳೆಗಳಿಗೆ ಸಾಲುಗಳ ಮಧ್ಯ ಜೀವಾಮೃತ ಹಾಕಬೇಕು. ಇದರಿಂದಾಗಿ ಮಣ್ಣಿನ ಸೂಕ್ಷ್ಮ ಜೀವಿಗಳ ಸಂಖ್ಯೆ ದ್ವಿಗುಣಗೊಂಡು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಎಂದು ಮನವರಿಕೆ ಮಾಡಿದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಟಿ.ಭೈರಪ್ಪನವರ್, ಗ್ರಾಮಸ್ಥರಾದ ಕುಮಾರ್, ಮಂಜೇಗೌಡ, ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net