ಜೀವಸಂಕುಲಕ್ಕೆ ಒಳಿತನ್ನೇ ಬಯಸೋಣ

7
ಸವದತ್ತಿ ಪಟ್ಟಣದಲ್ಲಿ ವೆದ್ಯರ ದಿನಾಚರಣೆ ಪ್ರಯುಕ್ತ ವೈದ್ಯರಾದ ಡಾ.ಸಿ.ಬಿ.ನಾವದಗಿ, ಡಾ.ಕವಿತಾ ಎತ್ತಿನಮಠ ಅವರನ್ನು ಸನ್ಮಾನಿಸಲಾಯಿತು. ರಂಜಾನ್​ ದರ್ಗಾ, ಬಿ.ವಿ.ಮಲಗೌಡರ, ಡಾ.ಎನ್​.ಆರ್​. ಸವತೀಕರ, ಬಾಳಕೃಷ್ಣ ಮಿರಜಕರ, ಬಿ.ಎಸ್​. ಪುಟ್ಟಿ, ರಾಜಶೇಖರ ನಿಡವಣಿ, ಲಕ್ಷಿ$್ಮ ಅರಿಬೆಂಚಿ, ಸುಧೀರ ದೊಡಮನಿ ಇತರರು ಇದ್ದರು.
Published on

ಸವದತ್ತಿ: ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂದೆ ಬರಲು ಹನ್ನೆರಡನೆಯ ಶತಮಾನದಲ್ಲಿ ಜರುಗಿದ ಸಾಮಾಜಿಕ ಕ್ರಾಂತಿಯೇ ಕಾರಣ ಎಂದು ಸ ಾಹಿತಿ ರಂಜಾನ್​ ದರ್ಗಾ ಹೇಳಿದರು.

ಪಟ್ಟಣದ ಕೆಎಲ್​ಇ ಸಂಸ್ಥೆಯ ಎಸ್​.ವಿ.ಎಸ್​ ಬೆಳ್ಳುಬ್ಬಿ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂ ಮತ್ತು ಸವದತ್ತಿಯ ಶರಣ ಸಂಗಮದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 30ನೆಯ ಶರಣ ಸಂಗಮ ಅನುಭಾವ ಗೋಷ್ಠಿ, ವೈದ್ಯರ ದಿನಾಚರಣೆ ಹಾಗೂ ಪತ್ರಕರ್ತರ ದಿನಾಚರಣೆ
ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗಾಯತವೆನ್ನುವುದು ಎಲ್ಲರನ್ನೂ ಒಳಗೊಳ್ಳುವ ಧರ್ಮ. ಅದು ಸಿದ್ಧಾಂತ, ದರ್ಶನ, ಜೀವನ ವಿಧಾನವಾಗಿ ಬದಲಾಗಬೇಕು. ಕಾಯಕದ ಅನುಭವ ಇಲ್ಲದೆ ಅನುಭಾವವಿಲ್ಲ. ಅನುಭಾವವೇ ಲಿಂಗಾಯತ ಧರ್ಮದ ಪ್ರಮುಖ ಅಂಶ ಎಂದರು. ನಿಸರ್ಗದಲ್ಲಿ ಮನುಷ್ಯನನ್ನು ಹೊರತುಪಡಿಸಿ ಎಲ್ಲ ಜೀವಿಗಳು ಕಾಯಕ ಮಾಡಿಯೇ ಬದುಕುತ್ತಿವೆ. ಅವೆಲ್ಲವೂ ಚೆನ್ನಾಗಿದ್ದಾಗಲೇ ಜೀವಸಂಕುಲ ಎನಿಸಿಕೊಳ್ಳುತ್ತದೆ ಎಂದು ಬಸವಣ್ಣ ಹೇಳಿದ್ದಾರೆ. ಹಾಗಾಗಿ ಸಕಲ ಜೀವಸಂಕುಲಕ್ಕೆ ಲೇಸು ಬಯಸುವ ದೃಷ್ಟಿಕೋನ ನಮ್ಮದಾಗಬೇಕು ಎಂದರು.

ಕೆಎಲ್​ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಿ.ವಿ.ಮಲಗೌಡರ ಅಧ್ಯತೆ ವಹಿಸಿದ್ದರು. ಬಿ.ಎಸ್​.ಪುಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೈದ್ಯರಾದ ಡಾ.ಸಿ.ಬಿ.ನಾವದಗಿ, ಡಾ.ಕವಿತಾ ಎತ್ತಿನಮಠ, ಪತ್ರಕರ್ತರಾದ ಬಾಳಕೃಷ್ಣ ಮಿರಜಕರ, ಸುಧೀರ ದೊಡಮನಿ, ಪಿ.ಬಿ.ಬಾಳೋಜಿ, ಗಿರೀಶ ರೇವಡಿ ಅವರನ್ನು ಸತ್ಕರಿಸಲಾಯಿತು. ಪ್ರಾಚಾರ್ಯ ಡಾ.ಎನ್​.ಆರ್​. ಸವತೀಕರ, ರಾಜಶೇಖರ ನಿಡವಣಿ, ಬಸವರಾಜ ಕಪ್ಪಣ್ಣವರ, ಪ್ರೊ.ಎಂ.ಸಿ. ಹಾದಿಮನಿ, ಪ್ರೊ.ಮೋಹನ್​ ಬಿ. ಇತರರಿದ್ದರು. ಲಕ್ಷಿ$್ಮ ಅರಿಬೆಂಚಿ ಸಂಗಡಿಗರು ಪ್ರಾರ್ಥಿಸಿದರು. ಡಾ.ಎ.ಎ್​.ಬದಾಮಿ ಸ್ವಾಗತಿಸಿದರು. ಪ್ರೊ.ಕೆ.ರಾಮರೆಡ್ಡಿ ಪರಿಚಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net