ಜೀವವೈವಿಧ್ಯ ಸಂರಕ್ಷಣೆಗೆ ಸಮುದಾಯದ ಸಹಕಾರ ಅಗತ್ಯ

12-npk .1
ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆ ಆವರಣದಲ್ಲಿ ವನ ಮಹೋತ್ಸವದ ಅಂಗವಾಗಿ ಗಿಡಗಳನ್ನು ನೆಡಲಾಯಿತು. ಮರಿಸ್ವಾಮಿ, ಎಂ.ಎಂ.ವಿನಯ್, ನುಚ್ಚುಮಣಿಯಂಡ ಪಿ.ಚಿಂಗಪ್ಪ, ಚಂಗೇಟಿರ ಅಚ್ಚಯ್ಯ,ವರುಣ್ ಸುಬ್ಬಯ್ಯ, ಗಿರೀಶ್ ಮಾದಪ್ಪ, ಮುಕ್ಕಾಟಿರ ಸುತನ್ ಸುಬ್ಬಯ್ಯ, ಬಾಳೆಯಡ ದೀನಾ ಮಾಯಮ್ಮ ಇದ್ದರು.
Published on

ನಾಪೋಕ್ಲು: ಭವಿಷ್ಯಕ್ಕಾಗಿ ನೀರು ಮತ್ತು ಜೀವವೈವಿಧ್ಯವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಮುದಾಯದ ಸಹಕಾರ ಅಗತ್ಯ ಎಂದು ಅರಣ್ಯ ಇಲಾಖೆಯ ಮುಂಡ್ರೋಟು ವಲಯ ಅರಣ್ಯಾಧಿಕಾರಿ ಮರಿಸ್ವಾಮಿ ಹೇಳಿದರು.

ವನಮಹೋತ್ಸವ ಅಂಗವಾಗಿ ಅರಣ್ಯ ಇಲಾಖೆಯ ಮುಂಡ್ರೋಟು ವಲಯ, ನಾಪೋಕ್ಲು ಲಯನ್ಸ್ ಕ್ಲಬ್, ಬಲ್ಲಮಾವಟಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ವನಮಹೋತ್ಸವ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ. ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ನಿಸರ್ಗಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜತೆಗೆ ನೀರನ್ನು ಮಿತವಾಗಿ ಬಳಸಬೇಕು. ಸೋಲಾರ್ ವಿದ್ಯುತ್ ಬಳಕೆ ಮಾಡಬೇಕು ಎಂದರು.

ನಾಪೋಕ್ಲು ಲಯನ್ಸ್ ಕ್ಲಬ್ನ ಕಾರ್ಯ ಯೋಜನೆಗಳ ಆಯೋಜಕ ಎಂ.ಎಂ.ವಿನಯ್ ಮಾತನಾಡಿ, ಅರಣ್ಯ ಇಲಾಖೆ ವನ ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಎಲ್ಲರೂ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು. ವಾಣಿಜ್ಯ ಉದ್ದೇಶಕ್ಕಾಗಿ ಗಿಡ ನೆಡುವ ಬದಲು ವಿದ್ಯಾರ್ಥಿಗಳು ತಲಾ ಒಂದು ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.

ಶಾಲಾ ಆವರಣದಲ್ಲಿ 25 ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ನೇತಾಜಿ ವಿದ್ಯಾಸಂಸ್ಥೆಯ ಸಂಚಾಲಕ ನುಚ್ಚುಮಣಿಯಂಡ ಪಿ.ಚಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಚಂಗೇಟಿರ ಅಚ್ಚಯ್ಯ, ನಿರ್ದೇಶಕರಾದ ವರುಣ್ ಸುಬ್ಬಯ್ಯ, ಗಿರೀಶ್ ಮಾದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಉಪಾಧ್ಯಕ್ಷೆ ಬಾಳೆಯಡ ದೀನಾ ಮಾಯಮ್ಮ, ಲಯನ್ಸ್ ಕ್ಲಬ್ ಅಧ್ಯಕ್ಷ ಕುಂಚೆಟ್ಟಿರ ಸುಧಿ ತಿಮ್ಮಯ್ಯ, ಖಜಾಂಚಿ ಎಂ.ಬಿ.ಕುಟ್ಟಪ್ಪ, ಸದಸ್ಯರಾದ ಮೇರಿ ಚಿಟ್ಟಿಯಪ್ಪ, ವಸಂತ ಮುತ್ತಪ್ಪ, ಗಸ್ತು ವನಪಾಲಕರಾದ ತಿಲಕ್, ರವಿಕುಮಾರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net