ಜೀವರಾಶಿಗಳಿಗೆ ನೋವಾದರೆ ಕ್ಷಮೆ ಕೇಳಿ

1001 KLB 01
Published on

ಕಲಬುರಗಿ: ಅಸಂಖ್ಯಾತ ಸೂಕ್ಷಾö್ಮಣು ಜೀವರಾಶಿಗಳಿಗೆ ಮಾನವ ಜನ್ಮದಲ್ಲಿ ತಿಳಿದು, ತಿಳಿಯದೋ ಯಾರಿಗಾದರೂ ತೊಂದರೆ, ನೋವು ಆದರೆ ಬಹಿರಂಗ ಕ್ಷಮೆ ಕೇಳುವುದೇ ಕ್ಷಮಾವಳಿ ಪರ್ವದ ವಿಶೇಷ ಎಂದು ಪರಮ ಪೂಜ್ಯ ವಿದ್ಯಾಭೂಷಣ ಮುನಿ ಮಹಾರಾಜರು ಹೇಳಿದರು.

ನಗರದ ಗಾಜಿಪುರ ಜೈನ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಚಾತುರ್ಮಾಸದ ದಶಲಕ್ಷಣ ಪರ್ವದ ನಾಮಾವಳಿ ಪರ್ವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಜೀನ ಭಗವಂತರಲ್ಲಿ ಪ್ರಾರ್ಥಿಸಿ ಮಳೆ, ಬೆಳೆ, ರೈತರು ಸಮೃದ್ಧಿ ಆಗಲಿ. ಜೈನ ಧರ್ಮಕ್ಕಾಗಿಯೇ ಮುನಿಗಳು ಸೀಮಿತವಲ್ಲ. ಜಗತ್ತಿನಾದ್ಯಂತ ಅಹಿಂಸೆಯ ಮತ್ತು ಶಾಂತಿ ಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬರೂ ಜೈನಧರ್ಮದವರು ಎಂದರು.

ಬೆಳಗ್ಗೆ ಆದಿನಾಥ ಭಗವಂತರಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಮುನಿಗಳ ಆಹಾರಚರ್ಯ ನೆರವೇರಿತು. ಗಾಜಿಪುರ ಜೈನ ಮಂದಿರದಿAದ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಕಪಡಾ ಬಜಾರ್, ಬಾಂಡೆ ಬಜಾರ್ ಮೂಲಕ ಮಂದಿರದವರೆಗೆ ಅದ್ದೂರಿಯಾಗಿ ನೆರವೇರಿತು. ಮೆರವಣಿಗೆಗೆ ವಿವಿಧ ವಾದ್ಯಗಳು ಶೋಭೆ ನೀಡಿದವು.

ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಸುರೇಶ ಎಸ್.ತಂಗಾ, ಸಮಾಜದ ಹಿರಿಯರು, ಮುಖಂಡರು, ಶ್ರಾವಕ ಶ್ರಾವಕಿಯರು, ಮಹಿಳಾ ಮಂಡಳದವರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net