

ಚಿತ್ರದುರ್ಗ: ಜೀವನ ಒಂದು ನಾಟಕರಂಗ, ನಾವುಗಳು ಅದರಲ್ಲಿ ಪಾತ್ರಧಾರಿಗಳೆಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್,ಕದಳಿ ಮಹಿಳಾ ವೇದಿಕೆ,ಬಾಪೂಜಿ ಸಮೂಹ ಸಂಸ್ಥೆಗಳು,ರಂಗ ಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘದ ಪಿಳ್ಳೆಕೆರೇನಹಳ್ಳಿ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ,ಮಕ್ಕಳ ಕಲರವ ಮತ್ತು ಶಿವಸಂಚಾರ ನಾಟಕೋತ್ಸವದ ಸಾನಿಧ್ಯವಹಿಸಿ ಮಾತನಾಡಿ,ಬದುಕಿನಲ್ಲಿ ಎದುರಾಗುವ ನಾನಾ ಕಷ್ಟ -ಸುಖಗಳಿಗೆ ರಂಗ ಭೂಮಿ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ,ಮಠ ಮಾನ್ಯಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರ್ವಕಾಲದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿವೆ ಎಂದರು. ಸಂಸ್ಥೆ ಸಂಯೋಜಕ ಪ್ರೊ.ರುದ್ರಪ್ಪ,ನಿರ್ದೇಶಕ ಕೆ. ಎಂ.ಚೇತನ್,ಪರಿಷತ್ ತಾಲೂಕಾಧ್ಯಕ್ಷ ಷಡಾಕ್ಷರಯ್ಯ,ಕಾರ‌್ಯದರ್ಶಿ ಹುರುಳಿಬಸವರಾಜ್,ನಿ.ಪ್ರಾಧ್ಯಾಪಕ ನಂದೀಶ್,ಹಾಸ್ಯಸಾಹಿತಿ ಪರ ಮೇಶ್ವರಪ್ಪ ಕುದರಿ,ಸಿದ್ದಿವಿನಾಯಕ ದೇವಸ್ಥಾನದ ಅಧ್ಯಕ್ಷ ಶಿವಕುಮಾರ್,ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ,ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಪ್ರೊ.ಎಂ.ಆರ್.ಜಯಲಕ್ಷ್ಮೀ ಪ್ರಧಾನ ಕಾರ‌್ಯದರ್ಶಿ ಶೋಭಾಮಲ್ಲಿಕಾರ್ಜುನ್ ಇತರರು ಇದ್ದರು.
ಬಾಪೂಜಿ ಪಬ್ಲಿಕ್ ಶಾಲೆ ಮಕ್ಕಳು ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು. ಸಂಗೀತ ಕಾರ‌್ಯಕ್ರಮ ನಡೆಸಿಕೊಟ್ಟ ಗಾನಯೋಗಿ ಸಂ ಗೀತ ಪರಿಷತ್ತಿನ ವಿದ್ವಾನ್ ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರನ್ನು ಸನ್ಮಾನಿಸಲಾಯಿತು. ನಾಟಕಕಾರ ಟಿ.ಕೆ.ರಾಮರಾವ್ ಕಾದಂಬರಿ ಗ ಣೇಶ ಅಮೀನಗಡ ನಾಟಕಕ್ಕೆ ರೂಪಾಂತರಿಸಿರುವ ಬಂಗಾರದ ಮನುಷ್ಯ ನಾಟಕವನ್ನು ವೈ.ಡಿ.ಬದಾಮಿ ನಿರ್ದೇಶನದಲ್ಲಿ ಸಾಣೇಹಳ್ಳಿ ಶಿವ ಸಂಚಾರದ ಕಲಾವಿದರು ಪ್ರದರ್ಶಿಸಿದರು.