ಜೀವನಯೋಗ್ಯ ಪಿಂಚಣಿ, ವೇತನ ನೀಡಲು ಆಗ್ರಹ

44
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿಸಿಯೂಟ ಕಾರ್ಮಿಕರ ಬಾಕಿ ವೇತನ ಬಿಡುಗಡೆ, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಗುತ್ತಿಗೆ ನೌಕರರು ಬಿಸಿಯೂಟ ಯೋಜನೆಯನ್ನು ಪರಿಣಾಮಕಾರಿಗೆ ಮುನ್ನಡೆಸುತ್ತಿದ್ದಾರೆ. ಅವರಿಗೆ ಸೇವಾ ಹಿರಿತನದ ಭತ್ಯೆ ಇಲ್ಲ. ಶಾಲೆಗಳ ಆಯಾ ರೀತಿಯಲ್ಲಿ ಡಿ ದರ್ಜೆ ನೌಕರರಂತೆ ದುಡಿಸಿಕೊಳ್ಳಲಾಗುತ್ತಿದೆ. ಸುರಕ್ಷತಾ ಸಾಮಗ್ರಿಗಳನ್ನು ನೀಡದೆ ವಂಚಿಸಲಾಗುತ್ತಿದೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಹೆರಿಗೆ ರಜೆ ಮಂಜೂರಿ, ರಜಾ ದಿನಗಳಲ್ಲಿ ಕೆಲಸ ಮಾಡಿದವರಿಗೆ ದುಪ್ಪಟ್ಟು ವೇತನ ನೀಡಬೇಕು. ನಿವೃತ್ತಿ ವೇತನ, ಜೀವವಿಮೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರಿಗೆ ಮನವಿ ರವಾನಿಸಲಾಯಿತು.
ಭುವನಾ ಬಳ್ಳಾರಿ, ಉಮಾ ಹಿರೇಮಠ, ರೇಣುಕಾ ಕರಿಗಾರ, ಗೌರಮ್ಮ ಗುಡ್ಡಮನಿ, ಮಾಲತಿ ಮುಗಳಿ, ಯಲ್ಲಮ್ಮ ಭಜಂತ್ರಿ, ಜೈಬೂನ ಮಾಳಗಿ, ಮೀರಾಬಾಯಿ ಕಲಾಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net