ಜೀವನದಲ್ಲಿ ಹಣವೊಂದೇ ಬದುಕಲ್ಲ : ಎಸ್‌ಪಿ ಆನಂದಕುಮಾರ

H.D.Anandkumar, SP Inaugurated Open Day Project Exhibition Programme
ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಒಪನ್ ಡೇ ಪ್ರಾತ್ಯಕ್ಷತೆ ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಉದ್ಘಾಟಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ವಿ.ಜಿ.ಸಂಗಮ, ಸಂಯೋಜಕ ಡಾ.ಶಶಿಕಾಂತ ಚೋಳಕೆ, ಡಾ.ಆಸೀಫ್ ಮೊಮಿನ್, ಡಾ.ಗೀತಾಜಂಲಿ ಪಾಟೀಲ ಇದ್ದರು.
Published on

ವಿಜಯಪುರ: ಜೀವನದಲ್ಲಿ ಹಣವೊಂದೇ ಬದುಕಲ್ಲ, ನಾವುಗಳು ನಮ್ಮತನವನ್ನು ಎಂದಿಗೂ ಮರೆಯಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಒಪನ್ ಡೇ ಪ್ರಾತ್ಯಕ್ಷತೆ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದಿನನಿತ್ಯದ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಲ್ಲ ಸವಾಲುಗಳನ್ನು ಸಮಯಪ್ರಜ್ಞೆಯಿಂದ ನಿರ್ವಹಿಸಿ ಜನ ಸಾಮಾನ್ಯರಿಗೆ ಮತ್ತು ನಮ್ಮ ಕೈಲಾಗುವ ಕಾರ್ಯಗಳನ್ನು ಸಮಯೋಚಿತವಾಗಿ ಮತ್ತು ಯೋಜನಾಬದ್ಧವಾಗಿ ನಿರ್ವಹಿಸಿದರೆ ಯಾವುದು ಕಷ್ಟವಾಗುವುದಿಲ್ಲ ಎಂದರು.

ಯಾರಿಗೂ ಯಶಸ್ಸು ಸಾಂದರ್ಭಿಕವಾಗಿ ಸಿಗುವುದಿಲ್ಲ. ಅದು ನಮ್ಮಗಳ ಕೆಲಸ ಕಾರ್ಯಗಳಲ್ಲಿ ಸಮರ್ಪಣಾ ಭಾವನೆಯೊಂದಿಗೆ ತೊಡಗಿಸಿಕೊಂಡರೆ ಮಾತ್ರ ಯಶಸ್ಸು ಖಂಡಿತವಾಗಿ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ.ವಿ.ಜಿ.ಸಂಗಮ, ಸಂಯೋಜಕ ಡಾ.ಶಶಿಕಾಂತ ಚೋಳಕೆ, ಡಾ.ಆಸೀಫ್ ಮೊಮಿನ್, ಡಾ.ಗೀತಾಜಂಲಿ ಪಾಟೀಲ, ಪ್ರೊ.ಕಿರಣ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net