ಜೀವನದಲ್ಲಿ ಸಾಧಿಸುವ ಛಲವಿರಲಿ

Capture4
Published on

ಬಸವಕಲ್ಯಾಣ: ಜೀವನದಲ್ಲಿ ಗುರಿ ಇರಬೇಕು. ಇದನ್ನು ಸಾಧಿಸುವ ಛಲದ ಜತೆಗೆ ಕಠಿಣ ಪರಿಶ್ರಮ ಬೇಕು. ಅಂದಾಗ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಸಂಕಲ್ಪ ಪಿಯು ಕಾಲೇಜಿನ ಪ್ರಾಚಾರ್ಯ ಪ್ರಭುಲಿಂಗ ಕಲೋಜಿ ಹೇಳಿದರು.

ನಗರದ ಎಸ್ಎಸ್ಕೆ ಬಸವೇಶ್ವರ ಸ್ವತಂತ್ರ ಪಿಯು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾಥರ್ಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರೃ ಹೋರಾಟಗಾರರು, ದೇಶಭಕ್ತರು, ಸಾಧಕರ ಜೀವನ ಚರಿತ್ರೆಯನ್ನು ವಿದ್ಯಾಥರ್ಿಗಳು ಅರಿತು ಜೀವನದಲ್ಲಿ ಪ್ರೇರಣೆ ಪಡೆಯಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸಿದ್ರಾಮಪ್ಪ ಮಾಲಿಪಾಟೀಲ್ ಮಾತನಾಡಿ, ವಿದ್ಯಾಥರ್ಿಗಳು ಜೀವನದಲ್ಲಿ ದೊಡ್ಡ ಗುರಿಯೊಂದಿಗೆ ಅಧ್ಯಯನ ಪ್ರಾರಂಭಿಸಬೇಕು. ಅದಕ್ಕೆ ಅವಶ್ಯಕ ಮಾರ್ಗದಶನ, ತರಬೇತಿ, ಅನುಭವ ಮತ್ತು ಸಹಕಾರ ನೀಡಲಾಗುವುದು ಎಂದರು.

ಪ್ರೊ.ಎಸ್.ಕೆ.ಪಟವಾಡಿ ಮಾತನಾಡಿದರು. ಜಿ.ಪಿ.ತಿವಾರಿ, ಸುನೀಲಕುಮಾರ ಹಾಲು, ಸುಮನ ರೆಡ್ಡಿ, ವಿಜಯಕುಮಾರಿ ಚಳಕಾಪುರೆ, ಶರಣಬಸವ ಮಠಪತಿ, ಪರಮೇಶ್ವರ ಕೋಪತೆ ಇತರರಿದ್ದರು. ಕಾಲೇಜಿನ ಸಂಯೋಜಕ ಭೀಮಾಶಂಕರ ಬಿರಾದಾರ ಬೆಳಮಗಿ ಪ್ರಾಸ್ತಾವಿಕ ಮಾತನಾಡಿದರು. ರಾಜಶ್ರೀ ದಿಲೀಪಕುಮಾರ ಪ್ರಾರ್ಥನಾ ಗೀತೆ ಹಾಡಿದರು. ಸಂಗೀತಾ ಸೂರ್ಯಕಾಂತ ವಂದಿಸಿದರು. ಜ್ಯೋತಿ ಮತ್ತು ವೈಷ್ಣವಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net