ಜೀವನದಲ್ಲಿ ಆರೋಗ್ಯ ಬಹಳ ಮುಖ್ಯ: ಎಂ.ಡಿ ಲಕ್ಷ್ಮೀನಾರಾಯಣ್

ಜೀವನದಲ್ಲಿ ಆರೋಗ್ಯ ಬಹಳ ಮುಖ್ಯ: ಎಂ.ಡಿ ಲಕ್ಷ್ಮೀನಾರಾಯಣ್
Published on

ಹಾಸನ: ಜೀವನದಲ್ಲಿ ಆರೋಗ್ಯ ಬಹಳ ಮುಖ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಯು ಅಗತ್ಯವಾಗಿದ್ದು, ವೈದ್ಯರ ಸಲಹೆಯಂತೆ ನಾವು ಕ್ರೀಡೆಗೆ ಮಹತ್ವವನ್ನು ನೀಡಬೇಕು ಎಂದು ಮಾಜಿ ಶಾಸಕ ಎಂ.ಡಿ ಲಕ್ಷ್ಮೀನಾರಾಯಣ್ ಕಿವಿಮಾತು ಹೇಳಿದರು.

ನಗರದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಮೈದಾನ ಆವರಣದಲ್ಲಿ ಹಾಸನ ಜಿಲ್ಲಾ ದೇವಾಂಗ ನೌಕರ ಸಂಘ ಮತ್ತು ಜಿಲ್ಲಾ ದೇವಾಂಗ ಸಂಘದ ವತಿಯಿಂದ ಆಯೋಜಿಸಿದ್ದ ದೇವಾಂಗ ಕ್ರೀಡೋತ್ಸವ ಕಾರ್ಯಕ್ರಮವನ್ನು ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿ ಮಾತನಾಡಿದವರು. ಇಂದಿನ ದಿನಗಳಲ್ಲಿ ಆರೋಗ್ಯ ಬಹಳ ಮುಖ್ಯವಾಗಿದ್ದು, ಈಗಿನ ಜನರು ಕೆಲಸದ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಆರೋಗ್ಯದ ಕಡೆ ಗಮನ ನೀಡದೆ ಇರುವುದು ಬೇಸರದ ಸಂಗತಿಯಾಗಿದೆ ಎಂದ ಅವರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಹಾಗಾಗಿದೇವಾಂಗ ಸಮಾಜ ಇಂತಹ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸದ ವಿಚಾರವಾಗಿದೆ ಇದೇ ರೀತಿ ಕಾರ್ಯಕ್ರಮಗಳನ್ನು ಜಿಲ್ಲೆ ಹಾಗೂ ರಾಜ್ಯದ್ಯಂತ ಆಯೋಜಿಸಲಿ ಎಂದು ಆಶಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಅಬಕಾರಿ ಇಲಾಖೆ ಉಪಯುಕ್ತ ಡಿ. ನಾಗೇಶ್ ಕುಮಾರ್ ಮಾತನಾಡಿ, ನಗರದಲ್ಲಿ ಇದೇ ಮೊದಲ ಬಾರಿಗೆ ದೇವಾಂಗ ಸಮಾಜದ ವತಿಯಿಂದ ಸಮಾಜದ ಬಾಂಧವರಿಗೆ ಕ್ರೀಡಾಕೂಟವನ್ನು ಆಯೋಜಿಸಿದ್ದು, ಇದು ದೇವಾಂಗ ಸಮಾಜದ ಕುಟುಂಬೋತ್ಸವದಂತೆ ಕಾಣುತ್ತಿದೆ. ಕ್ರೀಡಾಕೂಟದಲ್ಲಿ ದೇವಾಂಗ ಸಮಾಜದ ಕುಟುಂಬದವರು ಭಾಗವಹಿಸಿದ್ದಾರೆ ಹಿರಿಯ ನಾಗರಿಕರಿಂದ ಕಿರಿಯರವರೆಗೂ ವಿವಿಧ ಮನೋರಂಜನೆ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಯುವಕರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದ ಅವರು ಕ್ರೀಡಾಕೂಟದಲ್ಲಿ ಸುಮಾರು 800ಕ್ಕೂ ಹೆಚ್ಚು ಜನ ಭಾಗವಹಿಸಿರುವುದರಿಂದ ಸಂಭ್ರಮ ಮನೆ ಮಾಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ದೇವಾಂಗ ನೌಕರ ಸಂಘದ ಅಧ್ಯಕ್ಷ ಬಿ. ಸೋಮಶೇಖರ್ ಅಧ್ಯಕ್ಷತೆವಹಿಸಿದ್ದರು. ದೃವತಾರೆ ಹೋಟೆಲ್ ಮಾಲಿಕ ಉಮಾ ಶಂಕರ್, ತ್ಯಾಗರಾಜ್, ನಾಗರಾಜ್, ಭರತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net