ಜೀವನದ ಯಶಸ್ಸಿಗೆ ಬೇಕು ಸಂಸ್ಕಾರ,ಶ್ರೀ ಕಬೀರ ಶ್ರೀ

CTD NEWS SHARANA..-----
Published on

ಚಿತ್ರದುರ್ಗ: ಬಸವಣ್ಣನವರ ಮಾತಿನಂತೆ ನಮ್ಮಲ್ಲಿ ಸ್ವಂತಿಕೆ ಇರ ಬೇಕಾದರೆ ಸಂಸ್ಕಾರ ಇರಬೇಕು,ಆಗ ನಮ್ಮ ಜೀವನ ಯಶಸ್ವಿಯಾಗುತ್ತದೆ ಎಂದು ಶ್ರೀ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು. ಶ್ರೀ ಮುರುಘಾಮಠದಲ್ಲಿ ಶುಕ್ರವಾರ ಶರಣ ಸಂಸ್ಕೃತಿ ಉತ್ಸವ ದ ಸಮಾರೋಪ ಹಾಗೂ ಸಂಗೀತ ಕಾರ‌್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು,ಆಸೆಯೇ ದುಃಖಕ್ಕೆ ಮುಖ್ಯಕಾರಣ. ನಮ್ಮ ದಾರಿ ಸರಿಯಾದ ಮಾರ್ಗದಲ್ಲಿರ ಬೇಕೆಂದರು.

ಮಾಜಿ ಶಾಸಕ ಮಹಿಮಾಪಟೇಲ್ ಮಾತನಾಡಿ,ಪರಿಸರದ ಬಗ್ಗೆ ಕಾಳಜಿಯನ್ನು ನಾವಿಂದು ಕಾಣುತ್ತಿಲ್ಲ.33000 ಸಾವಿರ ಕೆರೆಗಳ ಪೈಕಿ 3 ಸಾವಿರ ಕೆರೆಗಳು ಉಳಿದಿವೆ. ಕೆರೆಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸಂತೃಪ್ತ ಭಾವನೆಯಿಂದ ಕೆಲಸ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ್‌ಜತ್ತಿ,ಎಸ್‌ಜೆಎಂ ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ,ಬೀದರ್ ಬಸವ ಕೇಂದ್ರದ ಶರಣಪ್ಪ ಮಿಠಾರೆ,ಹಾಸನ ಯೂನಿಟೆಡ್ ಅಕಾಡೆಮಿಯ ಸಿ.ಎಂ ಚಂದ್ರಶೇಖರ್ ಮಾತನಾಡಿ ದರು. ಶಿವನಕೆರೆ ಬಸವಲಿಂಗಪ್ಪ,ಬಸವಕೇಂದ್ರದ ಪದಾಧಿಕಾರಿಗಳು, ಹರಗುರುಚರ ಮೂರ್ತಿಗಳು ಉಪಸ್ಥಿತರಿದ್ದರು. ಚಿತ್ರದುರ್ಗದ ಶಾರದಾ ಬ್ರಾಸ್ ಬ್ಯಾಂಡ್‌ನ ಎಸ್.ವಿ ಗುರುಮೂರ್ತಿ,ಸಿ.ಎಂ.ಚಂದ್ರಶೇಖರ್ ಹಾಗೂ ಮಡಿವಾಳಪ್ಪ ಅವರನ್ನು ಸನ್ಮಾನಿಸಲಾಯಿತು.

ಧಾರವಾಡ ವಿದುಷಿ ವಿಜೇತ ವರ್ಣಿಕರ್ ತಂಡದವರು ಕಥಕ್‌ನೃತ್ಯ ವೈಭವ,ಕೊಪ್ಪಳದ ನಾಗರಾಜ್ ಶ್ಯಾವಿ ಕೊಳಲು,ಚಿತ್ರದುರ್ಗದ ಡಾ.ಭವ್ಯರಾಣಿ ವಯೋಲಿನ್, ಗೋವಾದ ಪ್ರಸಾದ್ ಮಡಿವಾಳರ್ ತಬಲ ವಾದ್ಯಗೋಷ್ಠಿ ನಡೆಸಿಕೊಟ್ಟರು.

ಚಿತ್ರದುರ್ಗದ ಹಂಸಗಾನ ಮ್ಯೂಸಿಕಲ್ ಇವೆಂಟ್ಸ್ ಮತ್ತು ಪರಮರತ್ನ ಸಂಗೀತಸಂಸ್ಥೆ ಸಂಗೀತ ಸಂಯೋಜನೆಯಲ್ಲಿ ಗಾಯಕರಾದ ಶರಧಿಪಾಟೀಲ,ಖಾಸಿಂ,ನಂದಿನಿ,ಕೆ.ಗಂಗಾಧರ್,ಭಾಗ್ಯಗಂಗಾಧರ್,ಅಂಜಿನಪ,್ಪಹಿಮಂತ್‌ರಾಜ್,ಭಾರ್ಗವಿ ಶಮೀರ್ ಸಂಗೀತ ಕಾರ‌್ಯ ಕ್ರಮ ನಡಸಿಕೊಟ್ಟರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ್ತು ಸಹೋದರರು,ರುದ್ರೇಶ್‌ಐಗಳ್,ಬಿ ಕಾಂತರಾಜ್ ಸೇವಾರ್ಥಿಗಳಾಗಿದ್ದರು. ಸುಚಿತ್‌ಕುಲಕರ್ಣಿ ತಂಡದವರು ಪ್ರಾರ್ಥಿಸಿ,ರವಿ ಯಡಹಳ್ಳಿ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net