ಜೀವನದ ಪ್ರತಿ ದಿನವೂ ಶ್ರಾವಣ ಮಾಸವಾಗಲಿ

ydg02
Published on

ಕೊಡೇಕಲ್: ಶ್ರಾವಣ ಮಾಸ ಒಂದು ತಿಂಗಳ ಕಾಲ ಹೇಗೆ ವೃತಾಚರಣೆ ಮಾಡುತ್ತಿರೋ ಅದರಂತೆ ನಿತ್ಯ ಜೀವನವು ಕೂಡ ಶ್ರಾವಣ ಮಾಸವಾದಾಗ ಮಾತ್ರ ಈ ಬದುಕು ಸುಂದರವಾಗಲು ಸಾಧ್ಯ ಎಂದು ಶ್ರೀ ಗುರು ದುರದುಂಡೇಶ್ವರ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ನುಡಿದರು.

ಶ್ರಾವಣ ಮಾಸ ಸಮಾರೋಪದ ನಿಮಿತ್ತ ಗ್ರಾಮದ ಈಶ್ವರ ದೇವರಿಗೆ ಸೋಮವಾರ ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಪೂಜ್ಯರು, ಪವಿತ್ರ ಶ್ರಾವಣ ಮಾಸದಲ್ಲಿ ಹೇಗೆ ಎಲ್ಲ ದುಶ್ಚಟಗಳನ್ನು ತ್ಯಜಿಸಿ ವೃತಾಚರಣೆ ಮಾಡುತ್ತಾರೆ ಅದನ್ನು ಮುಂದುವರೆಸಿಕೊAಡು ಹೋದಾಗ ಮಾತ್ರ ನಾವು ಆಚರಣೆ ಮಾಡುವ ವೃತಗಳಿಗೆ ನಿಜವಾದ ಅರ್ಥ ಬರಲಿದೆ ಎಂದರು.

ಭಗವAತ ನೀಡಿದ ಈ ದೇಹ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಶ್ರಾವಣ ಮಾಸದಲ್ಲಿ ಆಚರಿಸುವ ಉಪವಾಸ, ದೇವರ ಪೂಜೆ ಸೇರಿ ಇನ್ನಿತರ ಧಾರ್ಮಿಕ ಕರ‍್ಯಗಳನ್ನು ಶ್ರಾವಣ ನಂತರವೂ ಮುಂದುವರೆಸಿಕೊAಡು ಹೋಗಬೇಕು ಎಂದು ಕಿವಿ ಮಾತು ಹೇಳಿದರು.

ಸಿದ್ದಲಿಂಗಸ್ವಾಮಿ ವಿರಕ್ತಮಠ, ಶಾಮಸುಂದರ ಜೋಶಿ, ಡಾ.ಬಿ.ಬಿ.ಬಿರಾದಾರ, ಅಯ್ಯಪ್ಪ ಪಡಶೆಟ್ಟಿ, ಬಸವರಾಜ ಅಂಗಡಿ, ಮಲ್ಲಣ್ಣ ಆರಲಗಡ್ಡಿ, ಮಲ್ಲಿಕಾರ್ಜುನ ಜಂಗಳಿ, ವಿಶಾಲ ಅಂಗಡಿ, ವಿಜಯಕುಮಾರ ಮದರಿ, ಗುಂಡಣ್ಣ ನಗನೂರ, ಬಸಣ್ಣ ಬಂಗಾರಗುAಡ ಇತರರಿದ್ದರು. ಕರ‍್ಯಕ್ರಮಕ್ಕೂ ಮೊದಲು ಈಶ್ವರ ದೇವರ ಉತ್ಸವ ಮೂರ್ತಿ ಮತ್ತು ಕಳಸಗಳನ್ನು ಗಂಗಾಸ್ನಾನ ಮಾಡಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net