

ದೇವನಹಳ್ಳಿ: ಹೆಣ್ಣು ತಾಯಿ, ಸೋದರಿ, ಸಂಗಾತಿ, ಮಗಳಾಗಿ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದ್ದಾಳೆ ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಹೇಳಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ವಿವಿಧ ಕ್ಷೇತ್ರದ ಸಾಧಕ ಮಹಿಳೆಯರಿಗೆ ಸನ್ಮಾನ, ಮಹಿಳಾ ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣಾ ಕಾರ್ಯಕ್ರದಲ್ಲಿ ಮಾತನಾಡಿದರು.
ಹೆಣ್ಣಿಗೆ ಅವಕಾಶ ನೀಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಈ ಕ್ಷೇತ್ರದಲ್ಲಿ ಮಹಿಳಾ ಮೋರ್ಚಾ ಪ್ರಬಲವಾಗಿ ಬೆಳೆದಿರುವುದೇ ಸಾಕ್ಷಿ ಎಂದರು.
ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಮಹಿಳೆ ಎಲ್ಲ ರಂಗದಲ್ಲಿಯೂ ಪುರಷರಿಗೆ ಸರಿಸಮನಾಗಿ ಸಾಧಿಸಬಲ್ಲ ಶಕ್ತಿ ಹೊಂದಿದ್ದಾಳೆ. ಕುಟುಂಬದಲ್ಲಿ ಹೆಣ್ಣು ಉತ್ತಮ ಶಿಕ್ಷಣ ಪಡೆದರೆ ಗ್ರಾಮವೇ ಸುಶಿಕ್ಷಿತ ಗ್ರಾಮವಾಗಲಿದೆ ಎಂದರು.
ಮಹಿಳೆ ಎಂದಿಗೂ ಅಬಲೆಯಲ್ಲ. ಬಿಜೆಪಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಹಾಗಾಗಿ ಬಿಜೆಪಿ ವಿಜಯಪಾತಕೆ ಹಾರಿಸುತ್ತಲೇ ಇದೆ ಎಂದು ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷ ಸೌಮ್ಯಾ ಗೋಪಾಲಕೃಷ್ಣ ಹೇಳಿದರು.
ಇನ್‌ಸ್ಪೆಪೆಕ್ಟರ್ ರಮೇಶ್, ಸ್ವಯಂ ರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಸಮಸ್ಯೆ ಇದ್ದರೆ 112 ಕ್ಕೆ ಕರೆ ಮಾಡಿದರೆ ಪೊಲೀಸರು ಸಹಾಯಕ್ಕೆ ಬರುತ್ತಾರೆ. ಅಪರಿಚಿತರನ್ನು ಮನೆಗೆ ಸೇರಿಸಬೇಡಿ. ಕುಟುಂಬದವರಿಗೆ ಗೊತ್ತಿಲ್ಲದ ಹಾಗೆ ವ್ಯವಹಾರ ಮಾಡಿ ಇಕ್ಕಟ್ಟಿಗೆ ಸಿಲುಕಬೇಡಿ ಎಂಬ ಕಿವಿಮಾತು ಹೇಳಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಪೂರ್ಣಿಮಾ ಪ್ರಕಾಶ್ ಮಾತನಾಡಿ, ಒತ್ತಡದ ಜೀವನ ಶೈಲಿಯಲ್ಲಿ ಮಹಿಳೆ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಆರೋಗ್ಯ ಸರಿ ಇಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಈ ಬಗ್ಗೆ ಕಾಳಜಿ ವಹಿಸಬೇಕು. ನಕಾರಾತ್ಮವಾಗಿ ಮಾತನಾಡುವವರನ್ನು ದೂರವಿಟ್ಟು, ಸಕರಾತ್ಮ ಆಲೋಚನೆಯೊಂದಿಗೆ ಮುಂದುವರಿಯರಿ ಎಂದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಖಜಾಂಚಿ ಸರಭಿ ರಘು, ತಾಲೂಕು ಅಧ್ಯಕ್ಷ ಸುನೀಲ್, ಉಪಾಧ್ಯಕ್ಷೆ ಆರ್.ಪುನೀತಾ, ಉಪಾಧ್ಯಕ್ಷ ರಾಮಕೃಷಣ ಹೆಗಡೆ, ಜಿಲ್ಲಾ ಕಾರ್ಯದರ್ಶಿ ನಾಗವೇಣಿ, ಪದಾಧಿಕಾರಿಗಳಾದ ಲಕ್ಷ್ಮೀ, ಸಾರಿಕಾ ಮಧುಸೂದನ್, ದಾಕ್ಷಾಯಣಿ, ಬಯಾಪ ಮಾಜಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ, ರಾಜ್ಯ ಪರಿಷತ್ ಸದಸ್ಯ ದೇ.ಸೂ.ನಾಗರಾಜ್, ಟೌನ್ ಅಧ್ಯಕ್ಷ ಸಂದೀಪ್, ನಾಮಿನಿ ಸದಸ್ಯ ನಾಗೇಶ್ ಮುತಾದವರಿದ್ದರು.