

ಮಧುಗಿರಿ
ಹಿಜಾಬ್, ಹಲಾಲ್ ವಿಷಯಗಳನ್ನು ವಿವಾದ ಸೃಷ್ಟಿಸಿ ಧರ್ಮಗಳ ಮಧ್ಯೆ ಶಾಂತಿ ಕದಡುವವರನ್ನು ಈ ಸಮಾಜ ಎಂದಿಗೂ ಮಿಸದು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಕುಂಚಿಟಿಗ, ರೆಡ್ಡಿ, ಗಂಗಟಕಾರ, ಉತ್ತಮಕೊಳಗ, ಹಳ್ಳಿಕಾರ, ರೊದ್ದಗಾರ ಒಕ್ಕಲಿಗರ ಬಳಗ ಮತ್ತು ಸಮಾಜದ ಬಂಧುಗಳು ಹಾಗೂ ಗ್ರಾಪಂ ಅಧ್ಯರು, ಉಪಾಧ್ಯರು, ಸದಸ್ಯರು ಹಮ್ಮಿಕೊಂಡಿದ್ದ ನೂತನ ಎಂಎಲ್ಸಿ ಆರ್.ರಾಜೇಂದ್ರ ರಾಜಣ್ಣ ಅವರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿ ಮಾಡುವುದನ್ನೇ ಕೆಲವರು ಕಾಯಕ ಮಾಡಿಕೊಂಡಿದ್ದು, ಇವುಗಳನ್ನು ಬಿಟ್ಟು ಬಡತನ, ನಿರುದ್ಯೋಗ ಸಮಸ್ಯೆ ನಿವಾರಿಸಲು ಮುಂದಾಗಬೇಕು. ರೋಗಿಗಳಿಗೆ ಅಗತ್ಯವಿರುವ ರಕ್ತವು ಯಾವ ಜಾತಿ, ಸಮುದಾಯಕ್ಕೆ ಸೇರಿದ ವ್ಯಕ್ತಿಯದ್ದು ಎಂಬುದನ್ನು ಯಾರೂ ಪರಿಗಣಿಸಲ್ಲ, ನಮಗೀಗ ಬೇಕಾಗಿರುವುದು ಪ್ರೀತಿ ವಿಶ್ವಾಸವೇ ಹೊರತು ದ್ವೇಷಗಳಲ್ಲ ಎಂದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ನಮ್ಮದೇ ಸಮಾಜದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೇ ತುಮಕೂರು ೇತ್ರಕ್ಕೆ ತಂದು ನಿಲ್ಲಿಸಿ ನನಗೆ ಟಿಕೆಟ್ ತಪ್ಪಿಸಿದ್ದು ಬೇಸರದ ಸಂಗತಿ. ಆಗ ಕೆ.ಎನ್.ರಾಜಣ್ಣ ನನಗೆ ಬೆಂಬಲ ಸೂಚಿಸಿದರು. ಒಕ್ಕಲಿಗ ಸಮಾಜದ ಧ್ವನಿಯಾಗಿ ರಾಜೇಂದ್ರ ರಾಜಕೀಯವಾಗಿ ಬೆಳೆಯಬೇಕಾಗಿದೆ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಇಂದಿನ ರಾಜಕಾರಣ ಬದಲಾಗುತ್ತಿದ್ದು, ರಾಜೇಂದ್ರ ಅವರಂತಹ ಯುವಕರು ಭವಿಷ್ಯದ ನಾಯಕರಾಗಲಿದ್ದಾರೆ. ಅವರು ಜಿಲ್ಲೆಯ ಭವಿಷ್ಯಕ್ಕಾಗಿ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಿ ಎಂದರು.
ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಈಗಿನ ಸರ್ಕಾರದಿಂದ ಎತ್ತಿನಹೊಳೆ ಯೋಜನೆ ಜಾರಿ ಅಸಾಧ್ಯ. ತಾಲೂಕಿನ 54 ಕೆರೆಗಳಿಗೆ ಎತ್ತಿನ ಹೊಳೆ ನೀರು ಹರಿಸಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ರಾಜೇಂದ್ರ ಕರೊನಾ ಸಂದರ್ಭದಲ್ಲಿ ಸಮಾಜಮುಖಿ ಕೆಲಸ ಮಾಡುವ ಮೂಲಕ ನೊಂದವರ, ಬಡವರು, ರೈತರಿಗೆ ನೆರವಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾನು, ಟಿ.ಬಿ.ಜಯಚಂದ್ರ ಒಂದೇ ತಾಯಿಯ ಮಕ್ಕಳಂತೆ ಇರುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ಜಿಲ್ಲೆಯ ಜನತೆ ಪಾತೀತವಾಗಿ, ಜಾತ್ಯತಿತವಾಗಿ ಬೆಂಬಲ ನೀಡಿದ್ದರಿಂದ ಹಾಗೂ ಜಿಲ್ಲೆಯ ಮುಖಂಡರಾದ ಡಾ.ಜಿ.ಪರಮೇಶ್ವರ ಅವರ ನೇತೃತ್ವ ಹಾಗೂ ಟಿ.ಬಿ.ಜಯಚಂದ್ರ ಮಾರ್ಗದರ್ಶನದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ರೈತರ, ಶೋಷಿತರ, ದೀನದಲಿತರ ಪರ ಧ್ವನಿಯಾಗಿ ನಿಲ್ಲುತ್ತೇನೆ. ಶಿರಾ ೇತ್ರದಲ್ಲಿ ಟಿ.ಬಿ.ಜಯಚಂದ್ರ ಅಭ್ಯರ್ಥಿಯಾಗಲಿದ್ದಾರೆ. ಅವರ ಗೆಲುವಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಜಿಲ್ಲೆ ಮತ್ತು ತಾಲೂಕುಗಳು ಅಭಿವೃದ್ಧಿ ಆಗಬೇಕಾದರೆ ಟಿಬಿಜೆ ಮತ್ತು ಕೆಎನ್ಆರ್ ಗೆಲ್ಲಬೇಕು ಎಂದರು.
ನೂತನವಾಗಿ ಆಯ್ಕೆಯಾದ ಒಕ್ಕಲಿಗ ಸಮಾಜದ ಅಧಿಕಾರಿಗಳು, ವೈದ್ಯರು, ಪ್ರತಿಭಾವಂತ ವಿದ್ಯಾರ್ಥಿಗಳು, ಕರೊನಾ ವಾರಿಯರ್ಸ್ ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಗೌರಿಬಿದನೂರು ಶಾಸಕ ಶಿವಶಂಕರ್, ಐ.ಐ.ಎಸ್.ಸಿ. ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಜೆ.ರೆಡ್ಡಿ, ರಾಷಿಯ ಕುಂಚಿಟಿಗ ಸಮಿತಿ ಅಧ್ಯ ರವಿಕುಮಾರ್, ರಾಜ್ಯ ಉತ್ತಮ ರೈತ ಮಹಿಳೆ ಪ್ರಶಸ್ತಿ ಪುರಸತೆ ಮಂಗಳಮ್ಮ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ನಾಗೇಶ್ ಬಾಬು, ಜಿ.ಎನ್.ಮೂರ್ತಿ, ಸಮುದಾಯದ ಮುಖಂಡರಾದ ಸಿದ್ದಲಿಂಗೇಗೌಡ, ಎಸ್.ಆರ್. ರಾಜಗೋಪಾಲ್, ಲಾಲಪೇಟೆ ಮಂಜುನಾಥ್, ನಟರಾಜ್, ಸುವರ್ಣಮ್ಮ, ಮಂಜುಳಾ ಆದಿನಾರಾಯಣರೆಡ್ಡಿ, ಕಲ್ಲಹಳ್ಳಿ ದೇವರಾಜು, ಶ್ರೀನಿವಾಸ್ ರೆಡ್ಡಿ ಇತರರು ಇದ್ದರು.