

ಕಂಪ್ಲಿ: ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನ ನಿಮಿತ್ತ ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಉಪವಿಭಾಗ ಕಚೇರಿಯಲ್ಲಿ ಸೋಮವಾರ ಇಂಜಿನಿಯರ್‌ಗಳ ದಿನ ಆಚರಿಸಲಾಯಿತು.
ಎಇ ಚಂದ್ರಶೇಖರ್ ಮಾತನಾಡಿ, ಜನ ಜೀವನ ಸರಳ ಮತ್ತು ಸುಲಭಗೊಳಿಸುವಲ್ಲಿ ಇಂಜಿಯರ್‌ಗಳ ಶ್ರಮ ಅಡಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿದೆ. ಸರ್ ಎಂ.ವಿಶ್ವೇಶ್ವರಯ್ಯ ಅವರ ತತ್ವ-ಆದರ್ಶ, ಜೀವನ ಸಿದ್ಧಾಂತ ಇಂದಿನ ಯುವಜತೆಗೆ ಪ್ರೇರಣಾದಾಯಕವಾಗಿವೆ ಎಂದರು. ಎಇ ಎಂ.ಹೇಮಾಶ್ರೀ, ಜೆಇ ಭಾರತಿ, ಕಂದಾಯ ನಿರೀಕ್ಷಕ ಶಂಭುಲಿಂಗಯ್ಯಸ್ವಾಮಿ, ಎಫ್‌ಡಿಎ ಸುಬ್ಬಾಲಕ್ಷ್ಮೀ, ಎಸ್‌ಡಿಎಗಳಾದ ಜಂಭುನಾಥ, ಯು.ಉಲ್ಲೇಶ್, ಸಿಬ್ಬಂದಿ ಇದ್ದರು.