ಜೀವನ ಶಿಕ್ಷಣ ಕಲಿಕೆ ಮುಖ್ಯ

nrp jc c
ಎನ್.ಆರ್.ಪುರದಲ್ಲಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ನಾಟಿ ವೈದ್ಯ ಶೆಟ್ಟಿಕೊಪ್ಪ ಬಾಲರಾಜ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.
Published on

ಎನ್.ಆರ್.ಪುರ: ಮನುಷ್ಯನಲ್ಲಿ ಸ್ವಾರ್ಥ ಭಾವ ಹೆಚ್ಚುತ್ತಿದ್ದು, ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದು, ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ ಎಂದು ನವೀನ್ ಲಾಯ್ಡ ಮಿಸ್ಕತ್ ಹೇಳಿದರು.

ಜೇಸಿ ಸಪ್ತಾಹದ ಸಮಾರೋಪದಲ್ಲಿ ಮಾತನಾಡಿ, ಮಕ್ಕಳಿಗೆ ಪುಸ್ತಕದ ಪಾಠ ಮಾತ್ರ ಕಲಿಸದೆ ಜೀವನ ನಡೆಸುವ ಜ್ಞಾನದ ಶಿಕ್ಷಣ ನೀಡಬೇಕು. ಗುರು ಹಾಗೂ ಗುರಿ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ಜೇಸಿ ದೇಶದಲ್ಲಿಯೇ ನಂ.1 ಸಂಸ್ಥೆಯಾಗಿದೆ. ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಜನರಿಗೆ ಹತ್ತಿರದಿಂದ ಸೇವೆ ನೀಡುತ್ತಿದೆ ಎಂದರು.

ರೋಟರಿ ಅಧ್ಯಕ್ಷ ಕಣಿವೆ ವಿನಯ ಮಾತನಾಡಿ, ರಾಜಕಾರಣಿಗಳು ಜೇಸಿ ಸಂಸ್ಥೆಯಂತೆ ಸಮಯ ಪಾಲನೆ ಹಾಗೂ ವ್ಯಕ್ತಿತ್ವ ಪರಿಶೋಧನೆ ಮಾಡುವುದನ್ನು ಕಲಿಯಬೇಕು. ವಿದ್ಯಾವಂತರ ಸಂಖ್ಯೆ ಜಾಸ್ತಿಯಾಗಿ ಸಂಸ್ಕಾರವಂತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದಲೇ ದುರ್ಬಲ ಸಮಾಜ ನಿರ್ಮಾಣವಾಗುತ್ತಿದೆ. ಶಿಕ್ಷಣ ಇಲ್ಲದೆದ ಸಾಧನೆ ಮಾಡಿದವರಿದ್ದಾರೆ. ಆದರೆ ಸಂಸ್ಕಾರ, ಸಂಸ್ಕೃತಿ ಇಲ್ಲದೆ ಇರುವವರು ಮಾಡಿರುವ ಇತಿಹಾಸವೇ ಇಲ್ಲ ಎಂದರು.

ಸೆಲ್ಯೂಟ್ ದ ಸೈಲಂಟ್ ವರ್ಕರ್ ಕಾರ್ಯಕ್ರಮದಡಿ ನಾಟಿವೈದ್ಯ ಶೆಟ್ಟಿಕೊಪ್ಪ ಬಾಲರಾಜ್ ಅವರನ್ನು ಸನ್ಮಾನಿಸಲಾಯಿತು. ಪಿ.ಆರ್.ಸದಾಶಿವ, ಕಣಿವೆ ವಿನಯ, ಡಿ.ರಮೇಶ್, ಡಾ. ನವೀನ್ ಲಾಯ್ಡ ಮಿಸ್ಕತ್, ಪ್ರಶಾಂತಕುಮಾರ್, ಯಡಗೆರೆ ಮಂಜುನಾಥ್, ಎಂ.ಸಿ.ಗುರುಶಾಂತಪ್ಪ, ಅಂಕಿತಾ ಪ್ರಜ್ವಲ್ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ರಾಗ ಮಯೂರಿ ಅಕಾಡೆಮಿ ವಿದ್ಯಾರ್ಥಿಗಳಿಗೆ ಭರತ ನಾಟ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ್ ಗೌಡ, ವಲಯ 14ರ ಉಪಾಧ್ಯಕ್ಷ ಜಿ.ಎನ್.ಪ್ರಶಾಂತಕುಮಾರ್, ಕನ್ಯಾಕುಮಾರಿ ಕಂಪರ್ಟ್ಸ್ ಮಾಲೀಕ ಡಿ.ರಮೇಶ್, ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಕಾರ್ಯದರ್ಶಿ ಮಿಥುನ್ ಗೌಡ, ಎಂ.ಪಿ.ಮನು, ಜೋಯಿ ಬ್ರೋ, ದಿಶಾ ಗೌಡ, ನಾಗವಂಶಿ ಗೌಡ, ಆದರ್ಶ, ಉದಯಗಿಲ್ಲಿ, ರಜಿತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net