ಜೀವನ ಪ್ರಮಾಣ ಪತ್ರ ಅಭಿಯಾನ

CTD 00000
Published on

ಚಿತ್ರದುರ್ಗ: ಬೆಂಗಳೂರು ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ ನೌಕರರ ಸಂಘದಿಂದ ಚಿತ್ರದುರ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಕೇಂದ್ರ, ರಾಜ್ಯ ಹಾಗೂ ಸಾರ್ವಜನಿಕ ಕ್ಷೇತ್ರದ ನಿವೃತ್ತ ನೌಕರರಿಗೆ ಪಿಂಚಣಿ ಮುಂದುವರಿಕೆ ಅಗತ್ಯಕ್ಕಾಗಿ ಜೀವನ ಪ್ರಮಾಣ ಪತ್ರ ಅಭಿಯಾನ ಉಚಿತವಾಗಿ ಏರ್ಪಡಿಸಲಾಗಿದೆ.

ಸಂಘದ ಉಪಾಧ್ಯಕ್ಷೆ ಎನ್. ನಾಗಲಕ್ಷ್ಮೀ, ಮೈಸೂರು ಅಂಚೆ ತರಬೇತಿ ಕೇಂದ್ರದ ನಿವೃತ್ತ ಉಪ ನಿರ್ದೇಶಕ ಎಸ್. ರಾಜಶೇಖರ್, ನಿವೃತ್ತ ಹಿರಿಯ ಅಂಚೆ ಅಧೀಕ್ಷಕರಾದ ಡಿ. ಶಿವಯ್ಯ, ಪ್ರಕಾಶ್,ದಾವಣಗೆರೆ ನಿವೃತ್ತ ಉಪ ಅಂಚೆಪಾಲಕ ಬಿ.ಟಿ. ಚಂದ್ರಶೇಖರ್ ಭಾಗವಹಿಸಲಿದ್ದಾರೆ.

ಅಭಿಯಾನಕ್ಕೆ ಆಗಮಿಸುವ ನಿವೃತ್ತ ನೌಕರರು ಪಿಂಚಣಿ ಪುಸ್ತಕ, ಪಿಂಚಣಿ ಜಮಾ ಆಗುತ್ತಿರುವ ಬ್ಯಾಂಕ್ ಅಥವಾ ಅಂಚೆ ಇಲಾಖೆ ಉಳಿತಾಯ ಖಾತೆಪಾಸ್ ಬುಕ್, ಆಧಾರ್ ಕಾರ್ಡ್ ಮತ್ತಿತರ ದಾಖಲೆ ತರಬೇಕೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net