ಜೀವದ ಹಂಗು ತೊರೆದು ಹೋರಾಡಿದ್ದರು

ಜಾಮಿಯಾ ಮಸೀದಿ ಸಮಿತಿ ವತಿಯಿಂದ ಆಲೂರಿನ ಶಾದಿ ಮಹಲ್‌ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
IMG_20230815_074521
Published on

ಆಲೂರು: ಜಾಮಿಯಾ ಮಸೀದಿ ಸಮಿತಿ ವತಿಯಿಂದ ಪಟ್ಟಣದ ಶಾದಿ ಮೋಹಲ್‌ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.


ಮಸೀದಿ ಅಧ್ಯಕ್ಷ ಅಬ್ದುಲ್ ವಹೀದ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದೇಶ 700 ವರ್ಷಗಳ ಕಾಲ ಸಂಪನ್ಮೂಲವಾಗಿತ್ತು. ಆ ಕಾಲದಲ್ಲಿ ಬ್ರಿಟಿಷರು 1958ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ಫೈಜಾಬಾದ್ ನೇತೃತ್ವದಲ್ಲಿ ಉಗಮವಾಯಿತು. ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿ ಸಹಿತ ಹಲವು ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಜೀವದ ಹಂಗು ತೊರೆದು ಹೋರಾಡಿದರು ಎಂದು ಸ್ಮರಿಸಿದರು.


ಸಮಿತಿ ಕಾರ್ಯದರ್ಶಿ ಕಬೀರ್ ಅಹಮದ್ ಮಾತನಾಡಿ, ಸ್ವಾಂತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೀವ ಕೊಂಡವರ ಸಂಖ್ಯೆ ಬಹಳಷ್ಟು ಇದೆ. ಬ್ರಿಟಿಷರ ಕೈಯಿಂದ ಭಾರತವನ್ನು ಮುಕ್ತ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಈ ಸ್ವಾತಂತ್ರ್ಯದ ಮಹತ್ವವನ್ನು ಅರಿತು ಒಗ್ಗಟ್ಟಿನಿಂದ ಜೀವಿಸಬೇಕು. ಕಲಹಗಳಿಗೆ ಅವಕಾಶ ಕೊಡದೆ ಏಕತೆಯಿಂದ ಬದುಕೋಣ ಎಂದು ಕರೆ ನೀಡಿದರು.


ಜಾಮಿಯಾ ಮಸೀದಿಯ ಸದಸ್ಯರಾದ ಜಾಫರ್, ಶಾಹಿದ್ ಸಲೀಂ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖುದ್ದೂಸ್, ಮಾಜಿ ಸದಸ್ಯ ಖಾಲಿದ್ ಪಾಷ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net