

ಕಲಬುರಗಿ: ರಾಜ್ಯದಲ್ಲಿ ನಿಂತರವಾಗಿ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ದುರ್ಘಟನೆಗಳು ಆದಾಗಲೊಮ್ಮೆ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಿ, ಮತಾಂಧರ ಕೈಗೆ ರಾಜ್ಯದ ಅಧಿಕಾರ ನೀಡಲಾಗುತ್ತಿದೆ ಎಂದು ವಿಧಾನ ಪರಿತಷ್ ಸದಸ್ಯೆ ವಿಧಾನ ಪರಿಷತ ಸದಸ್ಯೆ ಭಾರತಿಶೆಟ್ಟಿ ಹೇಳಿದರು.
ಕಾಂಗ್ರೆಸ್ ನಿರಂತರವಾಗಿ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಲೇ ಬಂದಿದೆ. ನೇಹಾ ಹಿರೇಮಠ ಹತ್ಯೆ, ಬೆಳಗಾವಿಯಲ್ಲಿ ಬೆತ್ತಲೆ ಮೆರವಣಿಗೆ, ಆಳಂದದಲ್ಲಿ ಅತ್ಯಾಚಾರ, ಹಾವೇರಿಯಲ್ಲಿ ಸಾಮೂಹಿಕ ಅತ್ಯಾಚಾರಗಳಾಗಿವೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಗುಂಗಿನಲ್ಲಿ ಬದುಕಿನ ಗ್ಯಾರಂಟಿ ಕಿತ್ತುಕೊಳ್ಳುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ, ಹನುಮಾನ ಚಾಲಿಸಾ ಹಾಕಿದರೆ ಹಲ್ಲೆ ಮಾಡಲಾಗುತ್ತದೆ. ಆದರೆ ಎಫ್‌ಐಆರ್ ಚಾಲಿಸಾ ಹಾಕಿದವರ ಮೇಲೆ ಮಾಡುತ್ತಾರೆ. ಪಾಕಿಸ್ತಾನ ಜಿಂದಾಬಾದ್ ಅಂದಿಲ್ಲ ಎಂದಿದ್ದ ಕಲಬುರಗಿ ಉಸ್ತುವಾರಿ ಸಚಿವ. ತುಷ್ಟೀಕರಣ ನೀತಿಯಿಂದ ಮತಾಂಧರ ಕೈಗೆ ರಾಜ್ಯವನ್ನು ಕೊಡುಗೆ ಹುನ್ನಾರ ನಡೆಯುತ್ತಿದೆ ಎಂದು ಭಾರತಿ ಶೆಟ್ಟಿ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅತ್ಯಾಚಾರಿಗೆ ಗಲ್ಲು ಶಿಕ್ಷೆ ನೀಡುವ ಕಾಯ್ದೆ, ಮುದ್ರಾ, ಸ್ಟಾÈಂಡಪ್ ಇಂಡಿಯಾ, ಸ್ವಸಹಾಯ ಸಂಘಗಳಿಗೆ ನೆರವು, ಉಜ್ವಲ ಯೋಜನೆ, ಮನೆ ಮನೆಗೆ ಶೌಚಗೃಹ, ಮಾತೃವಂದನೆ, ಕರೋನಾ ವೇಳೆ ದೇಶದ ೧೪೦ ಕೋಟಿ ಜನರಿಗೆ ಉಚಿತ ಲಸಿಕೆ ನೀಡಿ, ಜೀವಂತ ಗ್ಯಾರಂಟಿ ಒದಗಿಸಿದ್ದಾರೆ ಎಂದರು.
ಪ್ರಮುಖರಾದ ಶಶಿಕಲಾ ಟೆಂಗಳಿ, ಭಾಗೀರಥಿ ಗುನ್ನಾಪುರ, ಚಂದಮ್ಮ ಪಾಟೀಲ್, ಸಾವಿತ್ರಿ ಕುಳಗೇರಿ, ಶೋಭಾ, ಜ್ಯೋತಿ ಇದ್ದರು.