ಜೀವಜಲ, ಪೋಲಾಗದಿರಲಿ,

web5
ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಲಕ್ಷ್ಮೀ ದೇವಸ್ಥಾನ ಹತ್ತಿರ ಹಳ್ಳಕ್ಕೆ ಬ್ರಿಡ್ಜ್ ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡಿದರು. ಬಿ.ಆರ್.ಪಾಟೀಲ, ಕೆಂಚನಗೌಡ ಪಾಟೀಲ, ಸಿದ್ದಲಿಂಗ ಕಂಬಳ್ಳಿ, ಅಲ್ಲಪ್ಪ ಗುಡೇನವರ ಇತರರಿದ್ದರು.
Published on

ಮೂಡಲಗಿ: ನಾಗನೂರು ಪಟ್ಟಣದ ಬ್ರಿಡ್ಜ್ ಕಂ-ಬ್ಯಾರೇಜ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 2.75 ಕೋಟಿ ರೂಪಾಯಿ ಅನುದಾನ ಬಂದಿದ್ದು, ಇದೇ ನವೆಂಬರ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ನಾಗನೂರ ಪಟ್ಟಣದ ಲಕ್ಷ್ಮೀದೇವಿ ದೇವಸ್ಥಾನ ಹತ್ತಿರದ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ-ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಬ್ಯಾರೇಜ್ ನಿರ್ಮಾಣದಿಂದ ರೈತರು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವುದರ ಜತೆಗೆ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಲಿದೆ. ಮಳೆಯ ಅಭಾವದಿಂದ ಜನರಿಗೆ ಸಂಕಷ್ಟ ಎದುರಾಗಬಹುದು. ಈ ವರ್ಷ ನಿಗದಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದರಿಂದ ಹಿಡಕಲ್ ಜಲಾಶಯದಲ್ಲಿ 33ಟಿ.ಎಂ.ಸಿ ಮಾತ್ರ ನೀರು ಸಂಗ್ರಹ ಇದೆ. ನಾಲ್ಕು ವರ್ಷಗಳಿಂದ ಬರದ ಛಾಯೆ ಇರಲಿಲ್ಲ, ಆದರೀಗ ಕುಡಿಯುವ ನೀರಿಗೂ ಸಂಚಕಾರ ಬಂದಿದೆ. ಹಿಡಕಲ್ ಜಲಾಶಯದಿಂದ ಬಿಡುವ ನೀರನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಅನವಶ್ಯಕವಾಗಿ ನೀರು ಪೋಲು ಮಾಡಬೇಡಿರಿ ಎಂದು ಮನವಿ ಮಾಡಿದರು.

ಹಿರಿಯ ಸಹಕಾರಿ ಧುರೀಣ ಬಿ.ಆರ್.ಪಾಟೀಲ, ಪ್ರಭಾ ಶುಗರ್ಸ್ ನಿರ್ದೇಶಕ ಕೆಂಚನಗೌಡ ಪಾಟೀಲ, ಸಿದ್ದಲಿಂಗ ಕಂಬಳ್ಳಿ, ಮುಖಂಡರಾದ ಅಲ್ಲಪ್ಪ ಗುಡೇನವರ, ಗಜಾನನ ಯರಗಣವಿ, ಭೀಮಗೌಡ ಹೊಸಮನಿ, ಸುಭಾಸ ಪಡದಲ್ಲಿ, ಪರಶುರಾಮ ಬಬಲಿ, ಮುತ್ತೆಪ್ಪ ಖಾನಪ್ಪನವರ, ಬಸವರಾಜ ಕರಿಹೋಳಿ, ಸತ್ಯಪ್ಪ ಕರವಾಡಿ, ಸಿದ್ದಪ್ಪ ಯಾದಗೂಡ, ಯಮನಪ್ಪ ಕರಬನ್ನವರ, ಮಹಾದೇವ ನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net