ಜೀವ ಸಂಕುಲದ ಉಳಿವು

ctd 0004
Published on

ಚಿತ್ರದುರ್ಗ: ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಗರದ ಪ್ರಥಮ್ ಸಂಸ್ಥೆ ಖಜಾಂಚಿ ಸುಮಾ ಚಿದಾನಂದ್ ಹೇಳಿದರು. ಸಂಸ್ಥೆಯಿಂದ ವಿಶ್ವ ಭೂಮಿ ದಿನದ ಅಂಗವಾಗಿ ಚಿತ್ರದುರ್ಗ ತಾಲೂಕು ಸಿದ್ದಾಪುರದಲ್ಲಿ ಈಚೆಗೆ ಏರ್ಪಡಿಸಿದ್ದ ಬೀಜದ ಉಂಡೆ ತಯಾರಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭೂಮಿಯನ್ನು ರಕ್ಷಿಸದಿದ್ದರೆ ಜೀವ ಸಂಕುಲದ ಉಳಿವು ಅಸಾಧ್ಯ ಎಂದು ಎಚ್ಚರಿಸಿದರು. ಶಿಕ್ಷಕಿ ಚಂದ್ರಕಲಾ, ಸಂಸ್ಥೆ ನಿರ್ದೇಶಕಿ ಚೈತ್ರಾ ಮಾತನಾಡಿದರು. ಡಾ.ಮಹೇಶ್, ವಕೀಲ ಸುಧೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net