

ಚಿತ್ರದುರ್ಗ: ಸಂಜೀವಿನಿ ಜೀವ ರಕ್ಷಕ ಟ್ರಸ್ಟ್‌ನಿಂದ ನೀಡುವ ಜೀವ ರಕ್ಷಕ ಪ್ರಶಸ್ತಿಗೆ ಸಚಿವ ಸಂತೋಷ್ ಲಾಡ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಶುಕ್ರವಾರ ಟ್ರಸ್ಟ್‌ನಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಟ್ರಸ್ಟ್‌ನ ಪದಾಧಿಕಾರಿಗಳು ರಸ್ತೆ ಅಪಘಾತಗಳ ವೇಳೆ ಗಾಯಾಳುಗಳ ನೆರವಿಗೆ ಧಾವಿಸುವುದು, ತುರ್ತು ಸಂದರ್ಭದಲ್ಲಿ ರಕ್ತದಾನಕ್ಕಾಗಿ ಹಲವರನ್ನು ಸಂಪರ್ಕಿಸುವುದು ಸೇರಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಕೀಲ ದಾವಣಗೆರೆಯ ನಾಗರಾಜ್ ಮಾತನಾಡಿ, ಟ್ರಸ್ಟ್ ಸಂತೋಷ್ ಲಾಡ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದರು.
ಡಾ. ಸೌಮ್ಯಾ ಮಂಜುನಾಥ ಮಾತನಾಡಿ, ಸಮಾಜಮುಖಿ ಕೆಲಸಗಳ ಮೂಲಕವೇ ಗುರುತಿಸಿಕೊಳ್ಳುವ ಕೆಲಸವಾಗಬೇಕು. ನೆರವು ನೀಡುವ ಮಾನವೀಯ ಮೌಲ್ಯಗಳನ್ನು ಯುವಸಮೂಹ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರ್‌ಟಿಒ ಭರತ್ ಕಾಳಿಸಿಂಗೇ, ಸಾಮಾಜಿಕ ಕಾರ್ಯಕರ್ತ ಮುಬಾರಕ್ ಅಲಿ, ಸುನೀತಾ ನರ್ಸಿಂಗ್ ಹೋಂನ ಡಾ. ಸಂದೀಪ್, ಮಂಜುನಾಥ್, ಬಸವರಾಜ್ ಬಚ್ಚಬೋರನಹಟ್ಟಿ, ಸಂಜೀವಿನಿ ರಂಗಸ್ವಾಮಿ, ಪ್ರಸನ್ನ, ಶಶಿಧರ ಭತ್ತಯ್ಯನಹಟ್ಟಿ, ಚೇತನ್ ಬೋರನಹಳ್ಳಿ, ಮಹಂತೇಶ್, ಧನಂಜಯ್, ಪ್ರಸನ್ನ ಕೆನ್ನೆಡಲು, ಮಾಲ್ತೇಶ್ ಇತರರಿದ್ದರು.