ಜೀವ ಉಳಿಸುವಾಗ ಹಣಕ್ಕಿಂತ ಮಾನವೀಯತೆ ಮುಖ್ಯ

TYR WEB
Published on

ತ್ಯಾಗರ್ತಿ: ಜೀವ ಉಳಿಸುವ ಸಂದರ್ಭ ಬಂದಾಗ ಹಣ ಮುಖ್ಯವಾಗದೆ ಮಾನವೀಯತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಅಧ್ಯಕ್ಷ ಎಚ್.ಎಂ.ಶಿವಕುಮಾರ್ ಹೇಳಿದರು.

ಸಮೀಪದ ನಂದೀತಳೆಯಲ್ಲಿ ಕಾನುಗೋಡು ಹವ್ಯಕ ವಲಯ, ನಂದಿತಳೆ ಕೃಷಿ ಪತ್ತಿನ ಸಹಕಾರ ಸಂಘ, ಪ್ರಾಥಮಿಕ ಆರೋಗ್ಯ ಕೇಂದ್ರ ಉಳ್ಳೂರು, ರೋಟರಿ ರೆಡ್‌ಕ್ರಾಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಸಾಗರ ರಕ್ತನಿಧಿ ಕೇಂದ್ರವು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಅತಿ ಅಪರೂಪದ ಕ್ಲೆಯಾ ಯಂತ್ರವನ್ನು ಹೊಂದಿದೆ. ಇದು ರಕ್ತದಿಂದ ಹರಡುವ ರೋಗವನ್ನು ಪತ್ತೆ ಮಾಡಿ, ಸುರಕ್ಷಿತ ರಕ್ತವನ್ನು ಪೂರೈಸುತ್ತದೆ. ರಕ್ತನಿಧಿ ಕೇಂದ್ರ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಸೇವೆ ನೀಡುತ್ತಿದ್ದು, ತುರ್ತು ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ರಕ್ತ ಪೂರೈಕೆ ಮಾಡಲಾಗಿದೆ. ರಾಮಚಂದ್ರಾಪುರ ಮಠದ ಸ್ಥಳೀಯ ಸಂಘಟನೆಗಳು ಕಾಲಕಾಲಕ್ಕೆ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ರಕ್ತನಿಧಿ ಕೇಂದ್ರದ ಉದ್ದೇಶಗಳಿಗೆ ನೆರವಾಗುತ್ತಿರುವುದು ಪುಣ್ಯದ ಕಾರ್ಯ ಎಂದು ಹೇಳಿದರು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಜಿ.ಸಂಗಮ್ ರಕ್ತದಾನದ ಮಹತ್ವ ವಿವರಿಸಿದರು. 116 ಬಾರಿ ರಕ್ತದಾನ ಮಾಡಿರುವ ಬಿ.ಜಿ. ಗಜಾನನ ಭಟ್ ಅವರನ್ನು ರಕ್ತನಿಧಿ ಕೇಂದ್ರದಿಂದ ಗೌರವಿಸಲಾಯಿತು. ಇದೇ ವೇಳೆ 30 ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net