ಜೀವ ಉಳಿಸುವಲ್ಲಿ ರಕ್ತದಾನ ಮುಖ್ಯ

21MNL1
Published on

ಮುನವಳ್ಳಿ: ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಾಗಿಲ್ಲ. ಆದ್ದರಿಂದ ರಕ್ತವನ್ನು ಬೇರೊಬ್ಬರಿಂದಲೇ ದಾನದ ರೂಪದಲ್ಲಿ ಪಡೆಯಬೇಕಾಗಿದೆ. ಹೀಗಾಗಿ ರಕ್ತದಾನ ಶ್ರೇಷ್ಠ ದಾನವಾಗಿ ಗುರುತಿಸಿಕೊಂಡಿದ್ದು, ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಇಲ್ಲಿನ ಚನ್ನಬಸವ ಮಹಾಸ್ವಾಮೀಜಿ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಂಯುಕ್ತಾಶ್ರಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಎನ್‌ಎಸ್‌ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನಿಫಾ ಸಂವೇದನಾ-೨ರಡಿ ಗೋಕಾಕ ರೋಟರಿ ಸೇವಾ ಸಂಘದ ಡಾ.ಬಿ.ಸಿ. ಅಜಾರಿ ಮೆಮೋರಿಯಲ್ ಬ್ಲಡ್ ಸೆಂಟರ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗೋಕಾಕನ ರೋಟರಿ ಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೊಳ್ಳಿ ಮಾತನಾಡಿ, ರಕ್ತದಾನದಿಂದ ಕೊಬ್ಬು ಕಡಿಮೆಯಾಗಿ ನವಚೈತನ್ಯ ಉಂಟಾಗುತ್ತದೆ. ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ ಎಂದರು.

ರೋಟರಿ ಕಾರ್ಯದರ್ಶಿ ಸೋಮಶೇಖರ ಮಗದುಮ್, ನಿರ್ದೇಶಕ ಸತೀಶ ನಾಡಗೌಡರ, ಸಂಸ್ಥೆಯ ಉಪಾಧ್ಯಕ್ಷ ಅರುಣಗೌಡ ಪಾಟೀಲ, ಗಂಗಾಧರ ಗೊರಾಬಾಳ, ಶಂಕರ ಗಯ್ಯಾಳಿ, ಈರಣ್ಣ ಸಂಕನ್ನವರ, ಪ್ರಾಚಾರ್ಯ ಕೆ.ಬಿ. ನಲವಡೆ, ಎಂ.ಎಚ್. ಪಾಟೀಲ, ಎಂ.ಗಿರೀಶ, ರವಿ ಪೂಜೇರ, ಐ.ಕೆ. ಮಠಪತಿ, ಜಿ.ಜಿ. ಲಮಾಣಿ, ಜಿ.ಬಿ. ಕೊಪ್ಪದ, ಎಂ.ಸಿ. ಬಾಂಡೇಕರ, ಜಿ.ಎಸ್. ಹಿರೇಮಠ, ಶೇಖರ ಮುಪ್ಪಿನವರಮಠ, ಅಶೋಕ ಸಂಕಣ್ಣವರ, ದಾನು ಗದಗಿನ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net