ಜೀವ ಉಳಿಸಲು ರಕ್ತದಾನ ಸಹಕಾರಿ

12blk3
Published on

ಭಾಲ್ಕಿ: ರಕ್ತದಾನ ಮತ್ತೊಬ್ಬರ ಜೀವ ಉಳಿಸಲು ಸಹಕಾರಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾಧ್ಯಕ್ಷ ಸಂಗಮೇಶ ಗುಮ್ಮೆ ಹೇಳಿದರು. ಬೀರಿ(ಬಿ) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾತಂತ್ರö್ಯ ದಿನ ನಿಮಿತ್ತ ಶನಿವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಅಪಘಾತ ವೇಳೆ ಮತ್ತು ರಕ್ತದ ಕೊರತೆ ಇರುವ ರೋಗಿಗಳ ಆರೋಗ್ಯ ವೃದ್ಧಿಗೆ ರಕ್ತದಾನ ಪ್ರಯೋಜನ ಆಗಲಿದೆ. ಆರೋಗ್ಯವಂತ ಯುವಕರು ರಕ್ತದಾನ ಮಾಡಿದರೆ ಕೊರತೆ ನೀಗಲಿದೆ ಎಂದರು. ಸರ್ಕಾರಿ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಕಾರಬಾರಿ, ಪ್ರಮುಖರಾದ ಮೇಘರಾಜ ಪಾಟೀಲ್, ಬಸವ ಕಾರಬಾರಿ, ಸಚಿನ್ ಸೋನಾಳೆ, ರವಿ ಬಿರಾದಾರ, ಜಯರಾಜ ಅಚಿಗಾಂವೆ, ದೀಪಕ ಕಾರಬಾರಿ, ಪಪ್ಪು ಮಹಾರಾಜ, ಶಿವಲಿಂಗ ಸ್ವಾಮಿ, ರಾಹುಲ್, ಸಂದೀಪ ಬಿರಾದಾರ, ಸೋಹಿಲ್ ಮಾಸಲ್ದಾರ್, ಪ್ರಶಾಂತ ಮೇತ್ರೆ, ಕುಟಲಿಂಗ ಕೋಟೆ, ಮಹಾದೇವ, ಡಾ.ಶಂಕರ ಜಾಧವ್, ಇಮಾನುವೆಲ್, ಗಿರೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net