ಜೀವ ಉಳಿಸಲು ರಕ್ತದಾನ ಶಿಬಿರ ಅತ್ಯವಶ್ಯ

23-07-Shiva-3
ರಾಯಚೂರಿನ ಎಸ್‌ಸಿಎಬಿ ಕಾನೂನು ಕಾಲೇಜಿನಲ್ಲಿ ಸಿಟಿ ಎಲೆವನ್ ಕ್ಲಬ್‌ನಿಂದ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯಾಧ್ಯಕ್ಷ ಎಸ್.ವಿಜಯಕುಮಾರ ಪಾಟೀಲ್, ಮುಖಂಡರಾದ ರವಿ ಬೋಸರಾಜು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವೈ.ಶ್ರೀಕಾಂತರಾವ್, ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಉಪನ್ಯಾಸಕಿ ಡಾ.ಅರುಣಾ ಹಿರೇಮಠ ಇದ್ದರು.
Published on

ರಾಯಚೂರು
ತುರ್ತು ಪರಿಸ್ಥಿತಿಯಲ್ಲಿ ಮನುಷ್ಯನ ಜೀವ ಉಳಿಸಲು ಅಗತ್ಯವಿರುವ ರಕ್ತಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುವುದು ಅತ್ಯವಶ್ಯವಾಗಿದೆ ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಸ್ಥಳೀಯ ಎಸ್‌ಸಿಎಬಿ ಕಾನೂನು ಕಾಲೇಜಿನಲ್ಲಿ ಸಿಟಿ ಎಲೆವನ್ ಕ್ಲಬ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ವೀರ ಸಾರ್ವಕರ್ ಯೂಥ್ ಅಸೋಸಿಯೇಷನ್‌ನಿಂದ ದಿವಂಗತ ವಿಜಯರೆಡ್ಡಿ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನದಲ್ಲಿ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಸಾಕಷ್ಟು ಜನರು ಸಾವಿಗೀಡಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯುವ ಸಮೂಹ ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದೆ ಬರಬೇಕಾಗಿದೆ. ವಿಜಯರೆಡ್ಡಿ ಸ್ಮರಣಾರ್ಥ ಏರ್ಪಡಿಸಿರುವ ರಕ್ತದಾನದಂತಹ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಬೇಕು ಎಂದರು.
ಮುಖಂಡ ರವಿ ಬೋಸರಾಜು ಮಾತನಾಡಿ, ಬೆಂಗಳೂರಿನಲ್ಲಿ ದೊರೆಯುವಂತಹ ಗುಣಮಟ್ಟದ ಕ್ರಿಕೆಟ್ ತರಬೇತಿಯನ್ನು ಮಕ್ಕಳಿಗೆ ಜಿಲ್ಲೆಯಲ್ಲಿ ನೀಡುತ್ತಿರುವ ವೆಂಕಟರೆಡ್ಡಿಯಲ್ಲಿ ಕಾರ್ಯ ಶ್ಲಾಘನೀಯವಾಗಿದೆ. ಅವರಿಂದಾಗಿ ಜಿಲ್ಲೆಯಲ್ಲಿ ಯುವ ಕ್ರಿಕೆಟ್ ಪ್ರತಿಭೆಗಳು ಹೊರಬರುವಂತಾಗಿದೆ ಎಂದು ಹೇಳಿದರು.
ಸಿಟಿ ಎಲೆವನ್ ಕ್ಲಬ್ ಅಧ್ಯಕ್ಷ ಕೆ.ಶರಣರೆಡ್ಡಿ ಮಾತನಾಡಿ, ಕ್ಲಬ್ ವತಿಯಿಂದ ನಿರಂತರವಾಗಿ ಪ್ರೇರಣಾದಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಯುವಕರಿಗೆ ಮಾರ್ಗದರ್ಶನ ನೀಡುವ ಮೂಲಕ ಅವರ ಪ್ರತಿಭೆಯನ್ನು ಬೆಳೆಯುವಂತೆ ಮಾಡಲಾಗುತ್ತಿದೆ. ಕ್ಲಬ್‌ನ ಹಲವಾರು ಯುವ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ತಂಡಗಳಿಗೆ ಆಯ್ಕೆಯಾಗುವ ಮೂಲಕ ಕೀರ್ತಿ ತಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯಾಧ್ಯಕ್ಷ ಎಸ್.ವಿಜಯಕುಮಾರ ಪಾಟೀಲ್, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ವೈ.ಶ್ರೀಕಾಂತರಾವ್, ಕಾರ್ಯದರ್ಶಿ ಅಂಬಾಪತಿ ಪಾಟೀಲ್, ಆರ್‌ಡಿಎ ಮಾಜಿ ಅಧ್ಯಕ್ಷ ಆಂಜಿನೇಯ ಕಡಗೋಲ, ರಿಮ್ಸ್ ವೈದ್ಯಕೀಯ ಕಾಲೇಜಿನ ಡಾ.ಪೂಜಾಶ್ರೀ, ಉಪಾನ್ಯಾಸಕಿ ಡಾ.ಅರುಣಾ ಹಿರೇಮಠ, ಕ್ಲಬ್ ಪದಾಕಾರಿಗಳಾದ ವೆಂಕಟರೆಡ್ಡಿ, ಎಂ.ವಿಜಯಕುಮಾರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net