

ಕೊರಟಗೆರೆ: ಬಾಲ್ಯದಿಂದಲೇ ಕಾಂಗ್ರೆಸ್ ಸಿದ್ಧಾಂತ ಮೌಲ್ಯ, ಹೋರಾಟಗಾರರ ಪ್ರಭಾವವನ್ನು ನನ್ನ ತಂದೆ ಮೂಲಕ ಮೈಗೂಡಿಸಿಕೊಂಡು ಬಂದಿದ್ದೇನೆ. ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಹಾಸ್ಯಾಸ್ಪದ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣ ಹೊರವಲಯದಲ್ಲಿರುವ ಹನುಮಂತಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಾಂಗ್ರೆಸ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪದಲ್ಲಿ ಗುರುತಿಸಿಕೊಂಡಿದ್ದೇನೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಪಕ್ಷ ನನಗೆ ಎಲ್ಲವನ್ನೂ ನೀಡುತ್ತಾ ಬಂದಿದೆ. ಯಾವುದೇ ಕಾರಣಕ್ಕೂ ಅಧಿಕಾರ ಅಥವಾ ಆಮಿಷಕ್ಕೊಳಗಾಗಿ ಪ ಬಿಡುವ ಸಂದರ್ಭವೇ ಇಲ್ಲ. ನನ್ನ ಜೀವವಿರುವವರೆಗೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಜನರನ್ನು ಒಂದುಗೂಡಿಸಿ ಸಮಾನತೆ ಭಾವ ಮೂಡಿಸುತ್ತಿದೆ. ರೈತರಿಗೆ ನೀರಾವರಿ ಯೋಜನೆ ತರುವ ಮೂಲಕ ಬಡತನ ನಿಮೂರ್ಲನೆಗೆ ಪರಿಶ್ರಮಿಸುತ್ತಿದೆ. ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ ದೇಶದಲ್ಲಿ ಕೋಮುಗಳ ಮಧ್ಯೆ ವಿಷಬೀಜ ಬಿತ್ತುತ್ತಿದೆ ಎಂದು ಹೇಳಿದರು.
ಭ್ರಷ್ಟ ಸರ್ಕಾರ: ರಾಜ್ಯ ಸರ್ಕಾರವು ಇತಿಹಾಸ ತಿರುಚಿ ಪಠ್ಯ ಪುಸ್ತಕವನ್ನು ಶಾಲಾ ಮಕ್ಕಳಿಗೆ ಒದಗಿಸುವ ಹುನ್ನಾರ ಮಾಡುತ್ತಿದೆ. ಅಂಬೇಡ್ಕರ್, ಬಸವಣ್ಣ ಹಾಗೂ ಕುವೆಂಪು ಅವರ ಜೀವನ ಚರಿತ್ರೆ ತಿರುಚಲಾಗಿದೆ ಎನ್ನುವ ಆಪಾದನೆ ಇದ್ದರೂ ಕೆಲವರ ಒತ್ತಡಕ್ಕೆ ಸರ್ಕಾರ ಮಣಿಯುತ್ತಿದೆ ಎಂದು ಹೇಳಿದರು. ರಾಜ್ಯ ಗುತ್ತಿಗೆದಾರರ ಸಂದ ಅಧ್ಯಕ್ಷ, ಸರ್ಕಾರ ಮೇಲೆ ಶೇ.40 ಕಮಿಷನ್ ಆರೋಪ ಮಾಡಿದರೂ ಅದಕ್ಕೆ ಸ್ಪಷ್ಟನೆ ನೀಡಿಲ್ಲ. ಜನರ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬಡಜನರಿಗೆ ತೊಂದರೆಯಾಗಿದೆ. ಕೃಷಿ ಉತ್ಪನ್ನಗಳ ಬೆಲೆ ದುಬಾರಿ ಮಾಡಿದೆ. ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲಿಯೇ ನಂ.1 ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.
8 ಗುಂಟೆ ಭೂಮಿ ದಾನ: ಕೊರಟಗೆರೆ ವಿಧಾನಸಭೆ ೇತ್ರಕ್ಕೆ ಸ್ವಂತ ಕಾಂಗ್ರೆಸ್ ಭವನ ನಿರ್ಮಿಸಲು ಸೋಮವಾರ ಅಡಿಗಲ್ಲು ಹಾಕಲಾಗಿದೆ. ನಿರ್ಮಾಣಕ್ಕೆ 8 ಗುಂಟೆ ಭೂಮಿಯನ್ನು ಪಟ್ಟಣದ ಉದ್ಯಮಿ ಎಚ್.ಮಹದೇವ್ ದಾನವಾಗಿ ನೀಡಿದ್ದಾರೆ. ಅವರಿಗೆ ಪದ ಅಭಾರಿಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಪ್ರತಿಯೊಬ್ಬ ಕಾರ್ಯಕರ್ತ ಮುಖಂಡ ಸಾರ್ವಜನಿಕರಿಂದ 1 ರೂ. ಯಿಂದ ಅವರ ಶಕ್ತಿ ಅನುಸಾರ ದೇಣಿಗೆ ಪಡೆಯಲಾಗುತ್ತಿದೆ. ಭವನ ಒಬ್ಬರಿಗೆ ಸೀಮಿತವಾಗದೆ ಪದ ಕಾರ್ಯಕರ್ತರಿಗೆ ಬಳಕೆಗೆ ಸಿಗಬೇಕು. ಅರಕೆರೆ ಶಂಕರ್, ಮಹಿಳಾ ಅಧ್ಯರಾದ ಜಯಮ್ಮ, ಶೈಲಜಾ, ಜಿಲ್ಲಾ ಕಾರ್ಯದರ್ಶಿ ಕವಿತಾ, ಯುವ ಅಧ್ಯ ವಿನಯ್ ಕುಮಾರ್, ಜಿಪಂ ಮಾಜಿ ಸದಸ್ಯ ಟಿ.ಡಿ.ಪ್ರಸನ್ನಕುಮಾರ್, ಪಪಂ ಸದಸ್ಯ ಎ.ಡಿ.ಬಲರಾಮಯ್ಯ, ಕೆ.ಆರ್. ಓಬಳರಾಜು, ವಡ್ಡಗೆರೆ ಗ್ರಾಪಂ ಅಧ್ಯ ವಸಂತಕುಮಾರ್, ಮುಖಂಡರಾದ ಎಚ್.ಮಹದೇವ್, ಎಂಎನ್ಜೆ ಮಂಜುನಾಥ್, ಬೈರಪ್ಪ, ವಾಲ ಚಂದ್ರಯ್ಯ, ಚಿಕ್ಕರಂಗಯ್ಯ ಕೆಂಚಮಾರಯ್ಯ ಇದ್ದರು.