ಜೀನಿ ಕಂಪನಿ ಮಾಲೀಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

Published on

ತುಮಕೂರು: ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಜೀನಿ ಕಂಪನಿ ಮಾಲೀಕ ದಿಲೀಪ್​ ಕುಮಾರ್​ ಅವರ ವಿರುದ್ಧ ಕಳ್ಳಂಬೆಳ್ಳ ಠಾಣೆಯಲ್ಲಿ ಗುರುವಾರ ಎ್​ಐಆರ್​ ದಾಖಲಾಗಿದೆ. ಕಂಪನಿಯಲ್ಲಿ 10 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಶಿರಾ ತಾಲೂಕಿನ ಯರಗುಂಟೆ ಗ್ರಾಮದ ಮಹಿಳೆಯೋರ್ವರು ತನಗೆ ಕಂಪನಿ ಮಾಲೀಕ ಲೈಂಗಿಕ ಕಿರುಕುಳ ನೀಡಿದ್ದಾಗಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಎ್​ಐಆರ್​ ದಾಖಲಿಸಿದ್ದಾರೆ.

6 ತಿಂಗಳಿನಿಂದ ಕಿರುಕುಳ: ಕಳೆದ 6 ತಿಂಗಳಿನಿಂದ ಕೆಲಸದ ವೇಳೆ ಕಂಪನಿ ಮಾಲೀಕ ದಿಲೀಪ್​ ಕುಮಾರ್​ ತನ್ನನ್ನು ಮೈ&ಕೈ ಮುಟ್ಟಿ ಮಾತನಾಡಿಸುವುದಲ್ಲದೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ರೀತಿ ನಡವಳಿಕೆ ಸರಿಯಲ್ಲ ಎಂದು ಖಂಡಿಸಿರುವುದಾಗಿ ದೂರಿರುವ ಮಹಿಳೆ, ಏ.19ರಂದು ಯಾರೂ ಇಲ್ಲದ ಶೆಡ್​ನಲ್ಲಿ ನನ್ನನ್ನು ಎಳೆದಾಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದು, ಸಹಕರಿಸದಿದ್ದರೆ ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆಯೊಡ್ಡಿದ್ದಾಗಿ ಗಂಭೀರ ಆರೋಪ ಎಸಗಿದ್ದಾರೆ.

ನನ್ನ ತೇಜೋವಧೆಗೆ ಈ ರೀತಿ ಮಹಿಳೆಯ ಕೈಯಲ್ಲಿ ದೂರು ಕೊಡಿಸಲಾಗಿದೆ. ರಾಜಕೀಯ ಪಿತೂರಿ ಹಿನ್ನೆಲೆಯಲ್ಲಿ ಇಂತಹ ಆರೋಪ ಮಾಡಲಾಗಿದೆ. ಜೀನಿ ಕಂಪನಿಯಲ್ಲಿ 86 ಸಿಸಿ ಟಿವಿಗಳಿದ್ದು 15 ದಿನದ ಡಿವಿಆರ್​ ಕೊಡುತ್ತೇನೆ. ನನ್ನ ವಿರುದ್ಧದ ಆರೋಪ ಸಾಬೀತುಪಡಿಸಲಿ. ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತೇನೆಂದು ಇಂತಹ ಸುಳ್ಳು ಆರೋಪ ಹೊರಿಸಿದ್ದಾರೆ. ಹಾಗಾಗಿ, ರಾಜಕೀಯ ಕ್ಷೇತ್ರಕ್ಕೆ ನಾನು ಕಾಲಿಡುವುದು ನಿಶ್ಚಿತ.

| ದಿಲೀಪ್​ ಕುಮಾರ್​ಜೀನಿ ಕಂಪನಿ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net