ಜಿಹಾದಿ ಕೃತ್ಯ ಖಂಡಿಸಿ ಬೃಹತ್ ಪ್ರತಿಭಟನೆ ಡಿ.9ರಂದು

siddaling Swamiji
Published on

ಕಲಬುರಗಿ: ಜಿಲ್ಲೆಯಲ್ಲಿ ಜಿಹಾದಿಗಳಿಂದ ಸರಣಿ ಅತ್ಯಾಚಾರ, ದೌರ್ಜನ್ಯ, ಮಕ್ಕಳ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಅದನ್ನು ತಡೆಯಲು ಆಗ್ರಹಿಸಿ, ಹಿಂದುಗಳ ರಕ್ಷಣೆಗೆ ಒತ್ತಾಯಿಸಿ, ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಚಂದ್ರAಪಳ್ಳಿಯಲ್ಲಿ ೭೫ ವಯಸ್ಸಿನ ವೃದ್ಧೆ ಮೇಲೆ ಜಿಹಾದಿ ತಯ್ಯಬ್‌ನಿಂದ ಅತ್ಯಾಚಾರ, ಜಿಮ್ಸ್ನಲ್ಲಿ ಜಿಹಾದಿ ಹೆಣ್ಣು ಮಕ್ಕಳಿಂದ ಮಗುವಿನ ಕಳ್ಳತನ, ಯಡ್ರಾಮಿಯಲ್ಲಿ ಜಿಹಾದಿ ಹಾಜಿ ಮಲಂಗ್‌ನಿAದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಚಿತ್ತಾಪುರದಲ್ಲಿ ೧೭ ವರ್ಷದ ಮಗುವಿನ ಮೇಲೆ ರೇಪ್ ಸೇರಿ ಸರಣಿ ಜಿಹಾದಿ ಕೃತ್ಯ ನಡೆದಿದ್ದು, ಇವೆಲ್ಲ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲು ಆಗ್ರಹಿಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡಿ.೯ರಂದು ಬೆಳಗ್ಗೆ ೧೧ಕ್ಕೆ ನಗರದ ಬಂಜಾರ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ೩೦ಕ್ಕಿಂತ ಹೆಚ್ಚು ಮಠಾಧೀಶರು, ಸರ್ವಸಮಾಜದ ಸಹಸ್ರಾರು ಹಿಂದು ಬಂಧುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಶ್ರೀನಿವಾಸ ಸರಡಗಿಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಕಾಯ್ದುಕೊಳ್ಳಲು ಹೋರಾಟ ಅಗತ್ಯವಾಗಿದೆ. ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹಮ್ಮಿಕೊಂಡ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಗೊಬ್ಬುರ ವಾಡಿಯ ಶ್ರೀ ಬಳಿರಾಮ ಮಹಾರಾಜ ಮಾತನಾಡಿ, ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು. ಯಡ್ರಾಮಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿಸ್ತÈತ ತನಿಖೆ ಆಗಬೇಕು. ಅಮಾನವೀಯತೆ ವಿರುದ್ಧ ಮಾನವೀಯತೆ ಹೋರಾಟವಿದ್ದು, ಮಗುವಿಗೆ ನ್ಯಾಯ ಕೊಡಿಸಬೇಕು. ಜಾತಿ, ಪಕ್ಷ ಬೇಧ ಮೀರಿದ ಹೋರಾಟ ಮಾಡೋಣ ಎಂದರು.

ಚೌಡಾಪುರ ಶ್ರೀ ಮುರಾರಿ ಮಹಾರಾಜ, ಶ್ರೀ ಗುರುಮೂರ್ತಿ ಶಿವಾಚಾರ್ಯರು, ಶ್ರೀ ವೀರಭದ್ರ ಶಿವಾಚಾರ್ಯರು, ಶ್ರೀ ಕೆಂಚಬಸವೇಶ್ವರ ಶಿವಾಚಾರ್ಯರು ಇತರರಿದ್ದರು.

ವಾಕ್ ಸ್ವಾತಂತ್ರÈಕ್ಕೆ ಧಕ್ಕೆ: ಜಿಲ್ಲೆಯಲ್ಲಿ ಅತ್ಯಾಚಾರ, ಸುಳ್ಳು ಅಟ್ರಾಸಿಟಿ ನಡೆಯುತ್ತಿದ್ದು, ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಮಾತನಾಡಿದರೆ ಬಂಧಿಸುವ, ಸುಳ್ಳು ಕೇಸ್ ಹಾಕುವ ಕುಕೃತ್ಯಕ್ಕೆ ಸರ್ಕಾರ ಇಳಿದಿದೆ. ಸಂವಿಧಾನ ಎನ್ನುವ ನಾಯಕನು ಪ್ರಶ್ನಾತೀತನಂತೆ ವರ್ತಿಸುತ್ತಿದ್ದಾರೆ. ಸರಣಿ ಅತ್ಯಾಚಾರ, ಜೇವರ್ಗಿಯಲ್ಲಿ ದಲಿತ ಯುವತಿಯನ್ನು ಜಿಹಾದಿ ಅಪಹರಿಸಿ ೩೬ ದಿನವಾದರೂ ಕೇಳುತ್ತಿಲ್ಲ. ಮಠಾಧೀಶರ ಬಗ್ಗೆ ವಾಚಾಮಗೋಚರ ಮಾತಾಡುತ್ತಾರೆ. ಅತ್ಯಾಚಾರಿಗಳ ಜತೆ ಯಡ್ರಾಮಿ ಕಾಂಗ್ರೆಸ್ ಮುಖಂಡರು ಹೊಂದಾಣಿಕೆ ಮಾಡಲು ಯತ್ನಿಸಿದ್ದು, ನಾಚಿಕೆಗೇಡು. ಜಿಲ್ಲೆಯ ಪೊಲೀಸ್ ವ್ಯವಸ್ಥೆ ಉಸ್ತುವಾರಿ ಮಂತ್ರಿ, ಕಾಂಗ್ರೆಸ್ ಬಾಲಂಗೋಚಿ ಆಗಿದೆ ಎಂದು ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಿಡಿ ಕಾರಿದರು.

ಸನಾತನ ಧರ್ಮದ ಮೇಲೆ ನಿರಂತರ ದೌರ್ಜನ್ಯ ನಡೆದಿವೆ. ಸಿಂದಗಿಯಲ್ಲಿ ೧೮ ಲವ್ ಜಿಹಾದ್ ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಬಲಿಷ್ಠ ಲಂಬಾಣಿ ಸಮಾಜದವರ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿವೆ. ಸಣ್ಣ ಪುಟ್ಟ ಹಿಂದುಳಿದ ಸಮಾಜದ ಸ್ಥಿತಿ ಗಂಭೀರವಾಗಿದೆ. ಮಲಗಿದ್ದು, ಎಚ್ಚರವಾಗದಿದ್ದರೆ ಭವಿಷ್ಯ ಕರಾಳವಿದೆ.

| ಶ್ರೀ ಸವಿತಾನಾಂದ ಸ್ವಾಮೀಜಿ

ಸವಿತಾ ಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net