

ಬೀದರ್: ತೆಲಂಗಾಣ ಮತ್ತು ಆಂಧ್ರಪ್ರದೇಶ ವಸೋದ್ಯಮದಲ್ಲಿ ಹೆಸರುವಾಸಿಯಾದ ಜಿವಿ ಮಾಲ್ ಶೋರೂಂ ನಗರದಲ್ಲಿ ಆರಂಭವಾಗಿದೆ.
ಮೋಹನ ಮಾರ್ಕೆಟನಲ್ಲಿ ತೆರೆದ ಶೋರೂಂ ಅನ್ನು ಅದ್ದೂರಿ ಸಮಾರಂಭದಲ್ಲಿ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮತ್ತು ಖ್ಯಾತ ನಟಿ ಆಶಿಕಾ ರಂಗನಾಥ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ನಟಿ ಆಶಿಕಾ ನೋಡಲು ಜನ ಮುಗಿಬಿದ್ದಿದ್ದರು. ಶೋರೂಂ ಎದುರು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಕಾರ್ಯಕ್ರಮದಲ್ಲಿ ನಟಿ ಪಾಲ್ಗೊಂಡಿದ್ದು ಮೆರುಗು ಹೆಚ್ಚಿಸಿತು.
ನಾಲ್ಕು ಅಂತಸ್ತಿನ ಭವ್ಯ ಕಟ್ಟಡದಲ್ಲಿ ಮಾಲ್ ತೆರೆಯಲಾಗಿದೆ. ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರತಿ ಬಟ್ಟೆ ಮೇಲೆ ವಿಶೇಷ ಆಫರ್ ನೀಡಲಾಗಿದೆ. ಶೋರೂಂನಲ್ಲಿ ಎಲ್ಲ ಬಗೆಯ ಭಿನ್ನ, ವಿಭಿನ್ನ ವಿನ್ಯಾಸದ ಬ್ರ್ಯಾಂಡೆಡ್ ಬಟ್ಟೆಗಳನ್ನು ಖರೀದಿಸಬಹುದಾಗಿದೆ. ಜಿಲ್ಲೆಯ ಗ್ರಾಹಕರು ಬೇರೆ ನಗರಗಳಿಗೆ ಹೋಗದಂತೆ ಅತ್ಯಾಕರ್ಷಕ, ಉತ್ಕೃಷ್ಟ ಗುಣಮಟ್ಟದ ಬಟ್ಟೆಗಳನ್ನು ಮಾಲ್ ಕಲ್ಪಿಸಿಕೊಟ್ಟಿದೆ. ಕಮ್ಮಿ ದರದಲ್ಲಿ ಉತ್ತಮ ವಸ ಸಿಗುವುದು ಇದರ ವೈಶಿಷ್ಟ್ಯ.
ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದು ಪಾಟೀಲ್, ತೆಲಂಗಾಣದ ಜಹೀರಾಬಾದ್ ಸಂಸದ ಬಿ.ಬಿ. ಪಾಟೀಲ್, ಶಾಸಕ ಮಾಣಿಕರಾವ್, ಜಿವಿ ಮಾಲ್ ಎಂಡಿ ಉಮಾ ಮಹೇಶ್ವರರಾವ್, ನಿರ್ದೇಶಕರಾದ ಮುರಳಿ, ವಾಸು, ಸಂತೋಷ, ರೇವಂಥ, ಅಂಕಿತ್ ಮತ್ತು ಗುರಂ ಶ್ರೀನಿವಾಸ, ನಾ.ಮಾ. ಅರವಿಂದ, ಕಿರಣಕುಮಾರ ಇತರರಿದ್ದರು.
ಕರ್ನಾಟಕದ ಮೊದಲ ಶೋರೂಂ
ಜಿವಿ ಮಾಲ್ ಮೂಲತಃ ತೆಲಂಗಾಣದ ಜಿಲ್ಲಾ ಕೇಂದ್ರವಾದ ಖಮ್ಮಮ್ ನಗರದು. ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ 9 ಶೋರೂಂ ಹೊಂದಿದ್ದು, ಕರ್ನಾಟಕದ ಬೀದರ್ ನಗರದಲ್ಲಿ 10ನೇ ಶೋರೂಂ ಆರಂಭಿಸಲಾಗಿದೆ. ಸಂಪೂರ್ಣ ಕೌಟುಂಬಿಕ ಉಡುಪುಗಳ ತಾಣ ಇದಾಗಿದ್ದು, ಮದುವೆ, ವಿವಿಧ ಸಮಾರಂಭ ಸೇರಿ ಮಕ್ಕಳದಿಂದ ಹಿಡಿದು ಹಿರಿಯರವರೆಗೆ ಬೇಕಾಗುವ ನಾನಾ ಬಗೆಯ ಅತ್ಯುತ್ತಮ ಗುಣಮಟ್ಟದ ಬಟ್ಟೆಗಳ ಭಂಡಾರವಿದೆ.