ಜಿಲ್ಲೆಯಲ್ಲಿಯೇ ಕಸ್ತೂರಬಾ ಶಾಲೆ ಉತ್ತಮ

02
Published on

ಕೊಡೇಕಲ್ : ಜಿಲ್ಲೆಯಲ್ಲಿಯೇ ಕೊಡೇಕಲ್ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಅಮೃತಬಾಯಿ ಹೇಳಿದರು.

ಬುಧವಾರ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣದೊಂದಿಗೆ ಮಕ್ಕಳಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವ ವೃತ್ತಿ ಕೌಶಲ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗಾಗಿಯೇ ವಿಶೇಷ ಕಾಳಜಿ ವಹಿಸಿ ಕೇಂದ್ರ ಸರ್ಕಾರ ಆರಂಭಿಸಿರುವ ಕಸ್ತೂರಬಾ ಗಾಂಧಿ ವಸತಿ ಶಾಲೆಯ ಲಾಭವನ್ನು ಪಡೆದುಕೊಳ್ಳಬೇಕು. ಶಿಕ್ಷಕರು ಕೂಡ ಈ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ನಂತರ ಶಾಲೆಯಲ್ಲಿನ ಮಕ್ಕಳ ದಾಖಲಾತಿ, ಕೋಣೆ, ಅಡು ಕೋಡೆ ಸೇರಿ ಎಲ್ಲ ಮೂಲಭೂತ ಸೌಲಭ್ಯ ಕುರಿತು ಪರಿಶೀಲಿಸಿದರು. ಈ ವೇಳೆ ಮಕ್ಕಳು ತಯಾರಿಸಿರುವ ವೃತ್ತಿ ಕೌಶಲ ವಸ್ತುಗಳನ್ನು ನೋಡಿ ಮೆಚ್ಚುಗೆ ಸಂತಸ ಪಟ್ಟರು.

ಪ್ರಾಚಾರ್ಯೆ ರಾಚಮ್ಮ ಪೂಜಾರಿ, ಪರ್ವಿನ್, ಈರಮ್ಮ, ಸಂಗೀತಾ, ವಿಜಯಲಕ್ಷ್ಮೀ, ಶಕುಂತಲಾ, ರೇಣುಕಾ, ಸಾವಿತ್ರಿ, ವಿಜಯಲಕ್ಷ್ಮೀ, ಮೈತ್ರಾ, ಭಾಗ್ಯಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net